ಬೆಳಗಾವಿ, ಡಿ. 13 (DaijiworldNews/HR): ಮತಾಂತರ ನಿಷೇಧ ಕಾಯ್ದೆ ಜಾರಿಯಾದ ಬಳಿಕ ರಾಜ್ಯದಲ್ಲಿ ಲವ್ ಜಿಹಾದ್ ವಿರುದ್ಧ ಕಾಯ್ದೆಯನ್ನು ತರುತ್ತೇವೆ ಎಂದು ಇಂಧನ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.
ಬೆಳಗಾವಿಯ ಸುವರ್ಣ ಸೌಧದಲ್ಲಿ ಮಾತನಾಡಿದ ಅವರು, ಗೋಹತ್ಯೆ ನಿಷೇಧ ಕಾಯ್ದೆ ತರುವುದಾಗಿ ಬಿಜೆಪಿ ಮೊದಲಿನಿಂದಲೂ ಹೇಳಿದ್ದು, ಅದರಂತೆ ಅದನ್ನು ಜಾರಿಗೆ ತಂದಿದೆ. ಇದೀಗ ಮತಾಂತರ ನಿಷೇಧ ಕಾಯ್ದೆಯನ್ನು ಈ ಅಧಿವೇಶನದಲ್ಲಿ ಜಾರಿಗೆ ತರುತ್ತೇವೆ" ಎಂದಿದ್ದಾರೆ.
ಇನ್ನು "ಮತಾಂತರವನ್ನು ಮಹಾತ್ಮ ಗಾಂಧಿ, ವಿವೇಕಾನಂದರು ಕೂಡಾ ವಿರೋಧಿಸಿದ್ದರು. ಈಗ ಈ ಕಾಯ್ದೆಗೆ ಕಾನೂನಿನ ಸ್ವರೂಪ ತರುತ್ತಿದ್ದೇವೆ. ಈ ವಿಚಾರದಲ್ಲಿ ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ" ಎಂದು ಹೇಳಿದ್ದಾರೆ.
ಯಾವ ಯಾವ ಕಾರಣಕ್ಕೆ ಮತಾಂತರ ಆಗುತ್ತಿದೆ. ಅದರ ದುಷ್ಪರಿಣಾಮ ಏನು ಎಂಬುದು ಗೊತ್ತಿದೆ. ಕೇವಲ ಒಂದು ಸಮುದಾಯವನ್ನ ಗುರಿಯಾಗಿಟ್ಟುಕೊಂಡು ಕಾಯ್ದೆ ತರುತ್ತಿಲ್ಲ. ಈ ಬಗ್ಗೆ ಚರ್ಚೆಗೆ ಬರಲಿ, ಉತ್ತರ ನೀಡಲು ನಾವು ಸಿದ್ಧವಿದ್ದೇವೆ ಎಂದು ಹೇಳಿದರು.