ನವದೆಹಲಿ, ಡಿ.13 (DaijiworldNews/PY): ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದ್ದು, "70 ವರ್ಷಗಳಲ್ಲಿ ಕಾಂಗ್ರೆಸ್ ನಿರ್ಮಿಸಿದ ಎಲ್ಲವನ್ನೂ ಈಗ ಬಿಜೆಪಿಯು 7 ವರ್ಷದ ಆಡಳಿತದಲ್ಲಿ ಮಾರಾಟ ಮಾಡುತ್ತಿದೆ" ಎಂದಿದ್ದಾರೆ.
ಜೈಪುರದಲ್ಲಿ ಹಮ್ಮಿಕೊಂಡಿರುವ ಮೆಹಂಗೈ ಹಠಾವೋ ರ್ಯಾಲಿಯಲ್ಲಿ ಮಾತನಾಡಿದ ಅವರು, "70 ವರ್ಷದಲ್ಲಿ ಕಾಂಗ್ರೆಸ್ ಏನು ಅಭಿವೃದ್ಧಿ ಮಾಡಿದೆ ಎಂದು ಬಿಜೆಪಿಗರು ಕೇಳುತ್ತಾರೆ. ಆದರೆ. ಕಾಂಗ್ರೆಸ್ 70 ವರ್ಷಗಳಲ್ಲಿ ಕಾಂಗ್ರೆಸ್ ನಿರ್ಮಿಸಿದ ಎಲ್ಲವನ್ನೂ ಈಗ ಬಿಜೆಪಿಯು 7 ವರ್ಷದ ಆಡಳಿತದಲ್ಲಿ ಮಾರಾಟ ಮಾಡುತ್ತಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ಧಾರೆ.
"ಏಳು ವರ್ಷಗಳ ಬಿಜೆಪಿ ಆಡಳಿತದಲ್ಲಿ ಆರೋಗ್ಯ ಸೇವೆಗಾಗಿ ಒಂದೇ ಒಂದು ಏಮ್ಸ್ ಸಂಸ್ಥೆಯನ್ನು ನಿರ್ಮಿಸಲಾಗಿದೆಯೇ? ನೀವು ಬಳಸುತ್ತಿರುವ ಪ್ರತಿ ವಿಮಾನ ನಿಲ್ದಾಣಗಳು ಕಾಂಗ್ರೆಸ್ನ ಅವಧಿಯಲ್ಲಿ ನಿರ್ಮಾಣವಾಗಿದ್ದು. ನೀವೇನು ಅಭಿವೃದ್ದಿ ಕಾರ್ಯ ಮಾಡಿದ್ದೀರಿ ಎನ್ನುವುದನ್ನು ತಿಳಿಸಿ" ಎಂದು ಕೇಳಿದ್ದಾರೆ.
"ದಿನ ಬಳಕೆಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಈ ವಿಚಾರವಾಗಿ ಯಾವೊಬ್ಬ ಬಿಜೆಪಿ ನಾಯಕನೂ ಸಹ ಸಾಮಾನ್ಯರ ಮಾತನ್ನು ಕೇಳಿಸಿಕೊಳ್ಳಲು ತಯಾರಿಲ್ಲ" ಎಂದು ಕಿಡಿಕಾರಿದ್ದಾರೆ.