ಹಿರಿಯೂರು, ಡಿ 13 (DaijiworldNews/MS): ಚಿತ್ರದುರ್ಗದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಹಿರಿಯೂರು ತಾಲೂಕಿನ ಆಲೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಟೈರ್ ಸ್ಪೋಟಗೊಂಡು ಲಾರಿ ಪಲ್ಟಿಯಾದ ಪರಿಣಾಮ ದುರ್ಘಟನೆ ನಡೆದಿದೆ.
ಮೃತರನ್ನು ಗದಗ ಮೂಲದ ಪ್ರಶಾಂತ್ (28), ಹನುಮಪ್ಪ (30), ರಮೇಶ್ (30), ಗುರಪ್ಪ(30) ಎಂದು ಗುರುತಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಆಲೂರು ಗ್ರಾಮದ ಬಳಿ ಟೈರ್ ಸ್ಪೋಟಗೊಂಡು ಲಾರಿ ಪಲ್ಟಿಯಾಗಿದ್ದು, ಲಾರಿ ಪಲ್ಟಿಯಾದ ಪರಿಣಾಮ ಒಂದು ಕಾರು, 5 ಲಾರಿಗಳ ನಡುವೆ ಸರಣಿ ಅಪಘಾತ ಸಂಭವಿಸಿದೆ. ಒಂದು ಲಾರಿ ಮುಖ್ಯರಸ್ತೆಯಿಂದ ಸೇವಾ ರಸ್ತೆಗೆ ಬಿದ್ದಿದೆ.ಅದರಲ್ಲಿದ್ದ ನಾಲ್ವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಐದು ಲಾರಿಗಳ ಪೈಕಿ ನಾಲ್ಕು ಲಾರಿಗಳಲ್ಲಿ ಈರುಳ್ಳಿ ತುಂಬಿಸಲಾಗಿತ್ತು.