ನವದೆಹಲಿ, ಡಿ.12 (DaijiworldNews/HR): ಭಾರತದಲ್ಲಿ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ ಏರಿಕೆಯಾಗ್ತಿದ್ದು, ನಾಗ್ಪುರದಲ್ಲಿ ಮೊದಲ ಒಮಿಕ್ರಾನ್ ಪ್ರಕರಣ ಪತ್ತೆಯಾಗಿದ್ದು, ಈ ಮೂಲಕ ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 37ಕ್ಕೆ ಏರಿಕೆಯಾಗಿದೆ.
ಸಾಂದರ್ಭಿಕ ಚಿತ್ರ
ಈ ಕುರಿತು ನಾಗ್ಪುರ ಮುನ್ಸಿಪಲ್ ಆಯುಕ್ತ ರಾಧಾಕೃಷ್ಣನ್ ಬಿ ಅವರು ಮಾಹಿತಿ ನೀಡಿದ್ದು, ನಾಗ್ಪುರಲ್ಲಿ ಒಮಿಕ್ರಾನ್ನ ಮೊದಲ ಪ್ರಕರಣ ದೃಢಪಟ್ಟಿದ್ದು, 40 ವರ್ಷದ ವ್ಯಕ್ತಿಯನ್ನ ಪರೀಕ್ಷೆಗೆ ಒಳಪಡಿಸಿದಾಗ ಕೊರೊನಾ ಸೋಂಕು ಆಗಿದ್ದು ಇದೀಗ ಅವರಿಗೆ ಒಮಿಕ್ರಾನ್ ತಗುಲಿರುವುದು ದೃಢಪಟ್ಟಿದೆ ಎಂದು ತಿಳಿಸಿದ್ದಾರೆ.
ಇನ್ನು ಕರ್ನಾಟಕದಲ್ಲಿ ಕೂಡ ಇಂದು ಮತ್ತೊಂದು ಹೊಸ ಒಮಿಕ್ರಾನ್ ಪ್ರಕರಣ ದಾಖಲಾಗಿದ್ದು, ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 3ಕ್ಕೆ ಏರಿಕೆಯಾಗಿ, ದೇಶದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ 37ಕ್ಕೆ ಏರಿಕೆಯಾಗಿದೆ.