ಚೆನೈ, ಡಿ.12 (DaijiworldNews/HR): 11ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಯೊಬ್ಬ ಲೂಸ್ ಶರ್ಟ್ ಧರಿಸಿ ಶಾಲೆಗೆ ಬಂದಿದ್ದಕ್ಕಾಗಿ ಆತನ ಶಿಕ್ಷಕರು ಥಳಿಸಿರುವ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ.
16ರ ಹರೆಯದ ಮಿಥುನ್ ಎಂಬ ವಿದ್ಯಾರ್ಥಿ ಲೂಸ್ ಶರ್ಟ್ ಧರಿಸಿದ್ದನ್ನು ಕಂಡ ಶಿಕ್ಷಕ ಶಿವರಂಜಿತ್ ಥಳಿಸಿದ್ದು, ಮಿಥುನ್ ಅವರ ಕಿವಿ, ಕುತ್ತಿಗೆ, ಕೈ ಮತ್ತು ಬೆನ್ನಿಗೆ ಗಾಯಗಳಾಗಿವೆ.
ಇನ್ನು ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ಮಿಥುನ್ ತಂದೆ ಕಲಾಧರನ್ಗೆ ಈ ಮಾಹಿತಿ ಲಭಿಸಿ ಮಿಥುನ್ ಅವರನ್ನು ಚಿಕಿತ್ಸೆಗಾಗಿ ಕೊಯಮತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದಿದ್ದಾರೆ.
ಕಲಾಧರನ್ ಸರವಣಂಪಟ್ಟಿ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ನಡೆಯುತ್ತಿದೆ.