ಕೊಪ್ಪಳ, ಡಿ.12 (DaijiworldNews/HR): ಶಾಲಾ ಮಕ್ಕಳಿಗೆ ಮೊಟ್ಟೆ ನೀಡುವ ಕುರಿತಾಗಿ ಪರ-ವಿರೋಧಗಳು ವ್ಯಕ್ತವಾಗುತ್ತಿದ್ದು, ಮಠಾಧೀಶರು ಶಾಲೆಯಲ್ಲಿ ಮೊಟ್ಟೆ ವಿತರಣೆಗೆ ವಿರೋಧ ವ್ಯಕ್ತಪಡಿಸಿರುವುದಕ್ಕೆ ಕೊಪ್ಪಳದ ಗಂಗಾವತಿಯ ವಿದ್ಯಾರ್ಥಿನಿ ನಾವು ಮಠಕ್ಕೆ ಬಂದು ಮೊಟ್ಟೆ ತಿಂತೀವಿ ಎಂದು ಸವಾಲು ಹಾಕಿರುವ ಘಟನೆ ನಡೆದಿದೆ.
ಮಕ್ಕಳಿಗೆ ಸರ್ಕಾರಿ ಶಾಲೆಗಳಲ್ಲಿ ಮೊಟ್ಟೆ ವಿತರಣೆಯನ್ನು ತಕ್ಷಣ ಸ್ಥಗಿತಗೊಳಿಸುವಂತೆ ರಾಜ್ಯದ ಕೆಲ ಮಠಾಧೀಶರು ಸರ್ಕಾರದ ಮೇಲೆ ಒತ್ತಡ ಹೇರಿದ್ದನ್ನು ಖಂಡೀಸಿ ಎಸ್ಎಫ್ಐ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ವಿದ್ಯಾರ್ಥಿಯೊಬ್ಬಳು, "ನಾವು ಮಠಕ್ಕೆ ಬಂದು ಮೊಟ್ಟೆ ತಿಂತೀವಿ. ನಾವು ಮೊಟ್ಟೆ ತಿಂದರೆ ಬದುಕುತ್ತೇವೆ. ಇಲ್ಲವಾದರೆ ನಾವು ಸಾಯುತ್ತೇವೆ. ನಾವು ಬದುಕುವುದು ಬೇಕಾ? ನಿಮಗೆ ಮೊಟ್ಟೆ ಕೊಡದಿರುವುದು ಬೇಕಾ?" ಎಂದು ಮಠಾಧೀಶರನ್ನು ಪ್ರಶ್ನಿಸಿದ್ದಾಳೆ.
ಇನ್ನು ಮಕ್ಕಳು ದೇವರು ಸಮಾನ ಎಂದು ಹೇಳುತತಾರೆ. ಹಾಗಾದರೆ ದೇವರ ಆಸೆ ಏಕೆ ಈಡೇರಿಸಲ್ಲ. ಮಠಕ್ಕೆ ಬಂದು ದಕ್ಷಿಣೆ ಹಾಕಿಲ್ವಾ? ಒಂದಲ್ಲ ಎರಡೆರಡು ಮೊಟ್ಟೆ ತಿಂತೀವಿ. ಮೊಟ್ಟೆಗಾಗಿ ರೋಡಿಗೆ ಬೇಕಾದರೂ ಇಳಿಯುತ್ತೇವೆ" ಎಮದು ವಾಗ್ದಾಳಿ ನಡೆಸಿದ್ದಾಳೆ.