ಬಾಗಲಕೋಟೆ, ಡಿ.12 (DaijiworldNews/HR): ಕಾಂಗ್ರೆಸ್ಗೆ ಹಿಂದೂ ಧರ್ಮದ ಬಗ್ಗೆ ಕಾಳಜಿ ಇಲ್ಲ. ಮುಸ್ಲಿಂ ,ಕ್ರಿಶ್ಚಿಯನ್ ಓಲೈಕೆಯಿಂದಾಗಿ ಕಾಂಗ್ರೆಸ್ ಕಸದ ತೊಟ್ಟಿಗೆ ಬಿದ್ದಿದೆ ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಮತಾಂತರ ವಿರೋಧಿ ಕಾನೂನನ್ನು ಜಾರಿಗೆ ತರಬೇಕು. ಧರ್ಮದ ಬಗ್ಗೆ ಕಾಳಜಿ ಇಲ್ಲದ ಕಾಂಗ್ರೆಸ್ ಸರ್ವನಾಶ ಆಗುತ್ತೆ. ಲಕ್ಷಾಂತರ ಜನರ ಮತಾಂತರದಿಂದ ನಾಗಭೂಮಿ ನಾಗಲ್ಯಾಂಡ್ ಆಗಿದೆ. ಇದು ಗೊತ್ತಾಗಲ್ವಾ ? ಎಂದು ಪ್ರಶ್ನಿಸಿದ್ದಾರೆ.
ಅಧಿಕಾರ ದಾಹಕ್ಕಾಗಿ ಈ ದೇಶವನ್ನು ಲೂಟಿ ಮಾಡುವುದಕ್ಕೋಸ್ಕರ ಇವತ್ತು ಕ್ತಿಶ್ಚಿಯನ್, ಮುಸ್ಲಿಂರನ್ನು ಬೆಳೆಸುತ್ತಿರುವಂತಹದ್ದು ಸರಿಯಲ್ಲ. ನಿಮ್ಮನ್ನು ಬಿಡುವುದಿಲ್ಲ ಇವರು. ನಿಮ್ಮ ಮನೆಯೊಳಗೆ ಹೋಗುತ್ತಾರೆ. ನಿಮ್ಮ ಮನೆದೇವರನ್ನೂ ಪೂಜೆ ಮಾಡಲು ಬಿಡುವುದಿಲ್ಲ ಇವರು" ಎಂದು ಕಾಂಗ್ರೆಸ್ ನಾಯಕರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.