ಬೆಂಗಳೂರು, ಡಿ.12 (DaijiworldNews/HR): ನೋಂದಾಯಿತಿ ಕಟ್ಟಡ ಕಾರ್ಮಿಕರು ವಾಸಸ್ಥಳದಿಂದ ಕೆಲಸದ ಸ್ಥಳಕ್ಕೆ ಹೋಗಿ ಬರಲು ಉಚಿತ ಬಸ್ ನೀಡುವ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಘೋಷಣೆ ಮಾಡಿದ್ದಾರೆ.
ಸಾಂದರ್ಭಿಕ ಚಿತ್ರ
ಈ ಹಿಂದೆ ಬೆಂಗಳೂರಿನಲ್ಲಿ ಮಾತ್ರ ಉಚಿತ ಬಸ್ ಪಾಸ್ ವಿತರಣೆ ಮಾಡಲಾಗುತ್ತಿತ್ತು. ಆದರೆ ಇದೀಗಾ ಈ ಯೋಜನೆಯನ್ನು ರಾಜ್ಯದಾದ್ಯಂತ ವಿಸ್ತರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇನ್ನು ಕಾರ್ಮಿಕರಿಗೆ ಸಾರಿಗೆ ವ್ಯವಸ್ಥೆ ಯೋಜನೆಯನ್ನು ಕಲ್ಪಿಸಲು ಕೆಎಸ್ಆರ್ಟಿಸಿ, ಈಶಾನ್ಯ, ವಾಯುವ್ಯ ಸಾರಿಗೆ ಸಂಸ್ಥೆಯೊಂದಿಗೆ ಸಭೆ ನಡೆಸಲಾಗಿದ್ದು, ಈ ಸಭೆಯಲ್ಲಿ ಕಾರ್ಮಿಕ ಇಲಾಖೆಯಿಂದಲೇ ಶೇಕಡಾ 100 ರಷ್ಟು ವೆಚ್ಚಬರಿಸಿ ಬಸ್ ಪಾಸ್ ವಿತರಣೆ ಮಾಡುವ ನಿರ್ಧಾರಕ್ಕೆ ಬರಲಾಗಿದೆ.
ಈ ಹಿಂದೆ ಪಾಸ್ ವಿತರಣೆಯ ಶೇಕಡಾ 80 ರಷ್ಟು ವೆಚ್ಚವನ್ನು ಕಾರ್ಮಿಕ ಇಲಾಖೆ ವಹಿಸುತ್ತಿದ್ದು, ಉಳಿದ ಶೇಕಡಾ 20 ರಷ್ಟು ವೆಚ್ಚವನ್ನು ಬರಿಸುವ ಪ್ರಸ್ತಾವನೆಗೆ ಬಿಎಂಟಿಸಿಯಿಂದ ಮೌಖಿಕ ಸಂದೇಶ ಸಿಕ್ಕಿತ್ತು. ಆದರೆ ಬಿಎಂಟಿಸಿ ಸಂಕಷ್ಟದಲ್ಲಿ ಇದ್ದ ಕಾರಣದಿಂದಾಗಿ ರಿಯಾಯಿತಿ ನೀಡಲು ಸಾಧ್ಯಾವಾಗಿರಲಿಲ್ಲ. ಇದೀಗಾ ಕಾರ್ಮಿಕ ಇಲಾಖೆಯಿಂದಲೇ ಶೇಕಡಾ 100 ರಷ್ಟು ವೆಚ್ಚ ಭರಿಸಿ ಉಚಿತ ಬಸ್ ಪಾಸ್ ನೀಡಲು ಸರ್ಕಾರ ನಿಧರಿಸಿದೆ.