ನವದೆಹಲಿ, ಡಿ.12 (DaijiworldNews/PY): ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ಟ್ವಿಟರ್ ಖಾತೆ ಶನಿವಾರ ರಾತ್ರಿ ಹ್ಯಾಕ್ ಮಡಿರುವ ಹ್ಯಾಕರ್ಗಳು ಬಿಟ್ ಕಾಯಿನ್ ಸಂಬಂಧ ಟ್ವೀಟ್ ಮಾಡಿದ್ದಾರೆ.
ಕೂಡಲೇ ಪ್ರಧಾನಿ ಕಾತೆಯಿಂದ ಟ್ವಿಟರ್ ಸಂಸ್ಥೆಗೆ ಮಾಹಿತಿ ನೀಡಲಾಗಿದ್ದು, ಟ್ವಿಟರ್ ಸಂಸ್ಥೆ ಪ್ರಧಾನಿ ಮೋದಿ ಅವರ ಟ್ವಿಟರ್ ಖಾತೆಯನ್ನು ಸರಿಪಡಿಸಿದೆ.
ಟ್ವಿಟರ್ ಖಾತೆ ಹ್ಯಾಕ್ ಆಗಿದ್ದ ಸಂದರ್ಭ, "ಬಿಟ್ ಕಾಯಿನ್ ಕಾನೂನುಬದ್ದಗೊಳಿಸಲಾಗಿದ್ದು, ಸರ್ಕಾರವು ಅಧಿಕೃತವಾಗಿ 500 ಬಿಟ್ ಕಾಯಿನ್ಗಳನ್ನು ಖರೀದಿಸಿದೆ. ಇದನ್ನು ದೇಶದ ಜನರಿಗೆ ವಿತರಿಸಲಾಗುವುದು" ಎಂದು ಟ್ವೀಟ್ ಮಾಡಲಾಗಿತ್ತು. ಇದರೊಂದಿಗೆ ಬಿಟ್ ಕಾಯಿನ್ ಕುರಿತಾದ ಲಿಂಕ್ ಹಂಚಲಾಗಿತ್ತು. ನಂತರ ಆ ಟ್ವೀಟ್ ಅನ್ನು ಅಳಿಸಿ ಹಾಕಲಾಗಿದೆ.
ಈ ಹಿಂದಿನ ಟ್ವೀಟ್ಗೆ ಸ್ಪಷ್ಟನೆ ನೀಡಿದ್ದು, "ಪ್ರಧಾನಿ ನರೇಂದ್ರ ಮೋದಿ ಅವರ ಟ್ವಿಟರ್ ಖಾತೆ ಕೆಲಕಾಲ ನಿಯಂತ್ರಣದಿಂದ ಜಾರಿತ್ತು. ಈ ವಿಚಾರವನ್ನು ಟ್ವಿಟರ್ ಗಮನಕ್ಕೆ ತರಲಾಗಿದ್ದು, ಖಾತೆಯನ್ನು ತಕ್ಷಣವೇ ಸುರಕ್ಷಿತಗೊಳಿಸಲಾಗಿದೆ. ಖಾತೆಗೆ ಧಕ್ಕೆ ಉಂಟಾಗಿರುವ ಈ ಅವಧಿಯಲ್ಲಿ ಹಂಚಿಕೆಯಾಗಿರುವ ಟ್ವೀಟ್ಗಳನ್ನು ಕಡೆಗಣಿಸಬೇಕು" ಎಂದಿದೆ.