ನವದೆಹಲಿ, ಡಿ.11 (DaijiworldNews/HR): ತಮಿಳು ನಾಡಿನ ನೀಲಗಿರಿ ಜಿಲ್ಲೆಯ ಕೂನ್ನೂರು ಬಳಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟಿರುವ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಪೃಥ್ವಿ ಸಿಂಗ್ ಚೌಹಾಣ್ ಅವರ ಅಂತ್ಯಕ್ರಿಯೆಯನ್ನು ಆಗ್ರಾದ ತಾಜ್ ಗಂಜ್ ಶವಾಗಾರದಲ್ಲಿ ಸಕಲ ಗೌರವಗಳೊಂದಿಗೆ ಶನಿವಾರ ನೆರವೇರಿಸಲಾಯಿತು.
ಮಿಲಿಟರಿ ವಾಹನದಲ್ಲಿ ಶವಾಗಾರಕ್ಕೆ ಕರೆತಂದ ನಂತರ ಅವರಿಗೆ ಭಾರತೀಯ ವಾಯುಪಡೆ ಸಿಬ್ಬಂದಿ ಗೌರವ ರಕ್ಷೆ ನೀಡಿದ್ದು, ಪೃಥ್ವಿ ಸಿಂಗ್ ಅವ್ರ ಏಳು ವರ್ಷದ ಮಗ ಅವಿರಾಜ್ ತನ್ನ ತಂದೆಯ ಕ್ಯಾಪ್ ಧರಿಸಿ ಅಂತಿಮ ನಮನ ಸಲ್ಲಿಸಿರುವ ಭಾವನಾತ್ಮಕ ಕ್ಷಣ ವೀಡಿಯೊದಲ್ಲಿ ಸೆರೆಹಿಡಿಯಾಗಿದೆ.
ಇನ್ನು ಈ ವೀಡಿಯೊವನ್ನ ಬಿಜೆಪಿ ನಾಯಕ ಕುಲ್ಜೀಪ್ ಸಿಂಗ್ ಚಹಲ್ ತಮ್ಮ ಟ್ವೀಟರ್ ನಲ್ಲಿ ಹಂಚಿಕೊಂಡಿದ್ದು, ಒಬ್ಬ ಮಗನಿಂದ ವಂದನೆ! ಧೈರ್ಯಶಾಲಿ ವಿಂಗ್ ಕಮಾಂಡರ್ ಪೃಥ್ವಿ ಸಿಂಗ್ ಚೌಹಾಣ್ ಅವ್ರ ಚಿಕ್ಕ ಮಗ ಅಂತಿಮ ಪ್ರಯಾಣದ ಸಮಯದಲ್ಲಿ ಐಎಎಫ್ ಕ್ಯಾಪ್ ಧರಿಸಿದ ನಂತ್ರ ತನ್ನ ತಂದೆಯ ಪಾರ್ಥಿವ ಶರೀರಕ್ಕೆ ವಂದಿಸುತ್ತಾನೆ. ಸೇನಾ ಹೆಲಿಕಾಪ್ಟರ್ ಪತನ ದುರಂತದಲ್ಲಿ ಮೃತ ಪಟ್ಟ ವೀರಾ ಸೇನಾನಿಗಳಲ್ಲಿ ಇವರು ಕೂಡ ಒಬ್ಬರು ಎಂದು ಬರೆದುಕೊಂಡಿದ್ದಾರೆ.