ಶಿವಮೊಗ್ಗ, ಡಿ.11 (DaijiworldNews/HR): ಯಾರೇ ಆದರೂ ಸ್ವತಂತ್ರವಾಗಿ ಅವರ ಧರ್ಮದಲ್ಲಿ ಬದುಕಲು ಅವಕಾಶವಿದೆ. ಅದರೆ ಬಲತ್ಕಾರವಾಗಿ ಮತಾಂತರ ಮಾಡಲು ಕಾನೂನಿನಲ್ಲಿ ಅವಕಾಶ ಇಲ್ಲ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಮತಾಂತರ ನಿಷೇಧ ಕಾಯ್ದೆ ಜಾರಿ ತರುವ ವಿಚಾರವಾಗಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಈಗಾಗಲೇ ಹೇಳಿದ್ದು, ಪದೇ ಪದೇ ಅಲ್ಲೊಂದು, ಇಲ್ಲೊಂದು ಮತಾಂತರ ಪ್ರಕರಣ ಕೇಳಿ ಬರುತ್ತಿದೆ. ಆ ದೃಷ್ಟಿಕೋನ ಇಟ್ಟುಕೊಂಡು ಮತಾಂತರ ಕಾಯ್ಧೆಯಲ್ಲಿ ತಿದ್ದುಪಡಿ ತರಲು ಸರ್ಕಾರ ಯೋಚಿಸುತ್ತಿದೆ" ಎಂದರು.
ಇನ್ನು "ಯಾರೇ ಆದರೂ ಸ್ವತಂತ್ರವಾಗಿ ಅವರ ಧರ್ಮದಲ್ಲಿ ಬದುಕಲು ಅವಕಾಶವಿದೆ. ಅದರೆ ಬಲತ್ಕಾರವಾಗಿ ಮಾಡಲು ಕಾನೂನಿನಲ್ಲಿ ಅವಕಾಶ ಇಲ್ಲ. ಈ ನಿಟ್ಟಿನಲ್ಲಿ ಬಿಗಿಯಾದ ನಿಲುವು ಬರುವುದು ಸರಿ ಇದೆ" ಎಂದಿದ್ದಾರೆ.