ಶಿವಮೊಗ್ಗ, ಡಿ.11 (DaijiworldNews/HR): ಕಾಂಗ್ರೆಸ್ನವರು ಬಿಟ್ ಕಾಯಿನ್ ಎನ್ನುತ್ತಿದ್ದಾರೆ. ಆದರೆ ಬಿಟ್ ಕಾಯಿನ್ ಎಂದರೆ ಏನೆಂದು ಅವರಿಗೆ ಅರ್ಥವೇ ಗೊತ್ತಿಲ್ಲ" ಎಂದು ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ವ್ಯಂಗ್ಯವಾಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ನವರಿಗೆ ಬಿಟ್ ಕಾಯಿನ್ ಎಂದರೆ ಏನೆಂದು ಅವರಿಗೆ ಅರ್ಥವೇ ಗೊತ್ತಿಲ್ಲ. ಆದರೆ ಸುರ್ಜೇವಾಲ ಹಾಗೂ ಕಾಂಗ್ರೆಸ್ ಮುಖಂಡರು ದಾಖಲೆ ಬಿಡುಗಡೆ ಮಾಡುತ್ತಾರೆ ಎಂದು ಹೇಳಿದ್ದರು. ದಾಖಲೆ ಇದ್ದಿದ್ದರೆ ಬಿಡುಗಡೆ ಮಾಡಲು ಇಷ್ಟು ಸಮಯ ಬೇಕೆ? ಎಂದು ಪ್ರಶ್ನಿಸಿದ್ದಾರೆ.
ಇನ್ನು ಭ್ರಷ್ಟಾಚಾರ ಎಂದರೆ ಕಾಂಗ್ರೆಸ್. ಕಾಂಗ್ರೆಸ್ ರಾಜಕೀಯ ಪಕ್ಷವಲ್ಲ ಬದಲಾಗಿ ಸ್ವಾತಂತ್ರಕ್ಕಾಗಿ ಹೋರಾಟ ಮಾಡಿದ ಸಂಸ್ಥೆ. ಸ್ವಾತಂತ್ರ್ಯ ನಂತರ ಕಾಂಗ್ರೆಸ್ ವಿಸರ್ಜನೆಯಾಗಿತ್ತು. ಆದರೆ ಕಾಂಗ್ರೆಸ್ ಹೆಸರಿನಲ್ಲಿ ಈಗ ನಕಲಿ ಕಾಂಗ್ರೆಸ್ಸಿಗರು ಭ್ರಷ್ಟಾಚಾರ ನಡೆಸುತ್ತಿದ್ದಾರೆ" ಎಂದರು.
"ಕಾಂಗ್ರೆಸ್ ಪಕ್ಷವು ಬಿಜೆಪಿ ಬಗ್ಗೆ ಆರೋಪ ಮಾಡುವ ಮೊದಲು ನಿಮ್ಮ ತಟ್ಟೆಯಲ್ಲಿ ಏನು ಬಿದ್ದಿದೆ ಎಂದು ನೋಡಿಕೊಳ್ಳಲಿ. ಬಿಜೆಪಿ ಪಕ್ಷ ಪಾರದರ್ಶಕವಾಗಿದೆ" ಎಂದು ಹೇಳಿದ್ದಾರೆ.