ನವದೆಹಲಿ, ಡಿ 11 (DaijiworldNews/MS): ಹೊಸ ಪ್ರಕರಣಗಳ ವರದಿಯಾಗುವುದರೊಂದಿಗೆ ಭಾರತದಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 33ಕ್ಕೆ ಏರಿಕೆಯಾಗಿದೆ. ಆದರೆ ತಜ್ಞರ ಪ್ರಕಾರ , ಭಾರತದಲ್ಲಿ ಕೊವೀಡ್ ನ ಹೊಸ ರೂಪಾಂತರ ಸೋಂಕು ಓಮಿಕ್ರಾನ್ ಹರಡುವಿಕೆಯ ತೀವ್ರತೆಯೂ ಡೆಲ್ಟಾಕ್ಕಿಂತ ಕಡಿಮೆ ಇದ್ದು ಇದು ಸೌಮ್ಯ ರೋಗಲಕ್ಷಣಗಳನ್ನು ಹೊಂದಿರುತ್ತದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಭಾರತೀಯರು ಹೆಚ್ಚಿನ ಪ್ರಮಾಣದ ಪ್ರತಿಕಾಯ ಹೊಂದಿದ್ದಾರೆ ತಜ್ಞರು ಹೇಳಿದ್ದಾರೆ.
"ಭಾರತವು 70, 80 ಪ್ರತಿಶತದಷ್ಟು 'ಸೆರೊಪೊಸಿಟಿವಿಟಿ' ದರದ ಪ್ರಯೋಜನ ಹೊಂದಿದ್ದು, ಭೃಹತ್ ನಗರಗಳಲ್ಲಿ 90 ಪ್ರತಿಶತಕ್ಕಿಂತ ಹೆಚ್ಚು ಜನರು ಈಗಾಗಲೇ ಪ್ರತಿಕಾಯಗಳನ್ನು ಹೊಂದಿದ್ದಾರೆ" ಎಂದು CSIR-ಸೆಂಟರ್ ಫಾರ್ ಸೆಲ್ಯುಲಾರ್ ಮತ್ತು ಮಾಲಿಕ್ಯುಲರ್ ಬಯಾಲಜಿಯ (CCMB) ಮಾಜಿ ನಿರ್ದೇಶಕ ರಾಕೇಶ್ ಮಿಶ್ರಾ ಅಭಿಪ್ರಾಯಪಟ್ಟಿದ್ದಾರೆ. ಜನರು ಓಮಿಕ್ರಾನ್ನಿಂದ ಸೋಂಕಿಗೆ ಒಳಗಾದರೂ, ಅದು ತುಂಬಾ ಸೌಮ್ಯವಾಗಿರುತ್ತದೆ ಮತ್ತು ಹೆಚ್ಚಾಗಿ ಲಕ್ಷಣರಹಿತವಾಗಿರುತ್ತದೆ ಎಂದು ಮಿಶ್ರಾ ಹೇಳಿದ್ದಾರೆ.
ಯುರೋಪ್ ನಲ್ಲಿ ಕಾಣಿಸಿಕೊಂಡಿರುವ ಕೊರೊನಾ ಅಲೆಯನ್ನು ಉಲ್ಲೇಖಿಸಿದ ಅವರು ಭಾರತದಲ್ಲಿ ಒಮಿಕ್ರಾನ್ ಅಲೆ ಕಾಣಿಸಿಕೊಳ್ಳದಿದ್ದರೂ ಸಹ ಸಾಂಕ್ರಾಮಿಕದ ಹೊಸ ಅಲೆಯು ಬರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.