ಬೆಂಗಳೂರು, ಡಿ.11 (DaijiworldNews/HR): ದೇಶದಲ್ಲಿ ಕೊರೊನಾ ಪ್ರಕರಣಗಳು ಮತ್ತೆ ಏರಿಕೆಯಾಗುತ್ತಿದ್ದು, ಇದರೊಂದಿಗೆ ಹೊಸ ರೂಪಾಂತರಿ ಒಮಿಕ್ರಾನ್ ಆತಂಕ ಸೃಷ್ಟಿಸಿದ್ದು, ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳಿಗೆ ಪತ್ರ ಬರೆದು ಎಚ್ಚರಿಕೆ ನೀಡಿದೆ.
ದೇಶದ ಎಲ್ಲ ರಾಜ್ಯಗಳಿಗೆ ಕೇಂದ್ರ ಆರೋಗ್ಯ ಕಾರ್ಯಕರ್ಶಿ ರಾಜೇಶ್ ಭೂಷಣ್ ಪತ್ರ ಬರೆದಿದ್ದು, ಕೊರೊನಾ ಕಟ್ಟಿ ಹಾಕಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ.
ಇನ್ನು ಕೊರೊನಾ ಕ್ಲಸ್ಟರ್ಗಳ ಪ್ರದೇಶಗಳಲ್ಲಿ ಕಾರ್ಯ ತಂತ್ರಗಳನ್ನ ಅನುಸರಿಸುವಂತೆ ಸೂಚಿಸಿದ ಕೇಂದ್ರ ಸರ್ಕಾರ, ನೈಟ್ ಕರ್ಫ್ಯೂ, ಜನಜಂಗುಳಿ ನಿರ್ಬಂಧಿಸಲು ತಿಳಿಸಿದ್ದು, ಸಭೆ, ಅಂತ್ಯಕ್ರಿಯೆ, ಮದುವೆಗಳಲ್ಲಿ ನಿರ್ಬಂಧಕ್ಕೆ ಸೂಚನೆ ನೀಡಿದೆ.