ಚಂಢಿಗಡ, ಡಿ.11 (DaijiworldNews/PY): "ಪತ್ನಿಯ ಒಪ್ಪಿಗೆ ಇಲ್ಲದೇ ಕರೆಗಳನ್ನು ರೆಕಾರ್ಡ್ ಮಾಡುವುದರಿಂದ ಅವರ ಖಾಸಗೀತನದ ಉಲ್ಲಂಘನೆಯಾಗುತ್ತದೆ" ಎಂದು ಪಂಜಾಬ್ ಹಾಗೂ ಹರಿಯಾಣ ಹೈಕೋರ್ಟ್ ತೀರ್ಪಿನ ಸ್ಪಷ್ಟಪಡಿಸಿದೆ.
ನ್ಯಾಯಪೀಠ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಸಹ ಈ ಸಂದರ್ಭ ರದ್ದುಗೊಳಿಸಿದೆ.
"ಬಟಿಂಡಾ ಕೌಟುಂಬಿಕಾ ನ್ಯಾಯಾಲಯದಲ್ಲಿ 2017ರಲ್ಲಿ ವಿಚ್ಛೇದನಕ್ಕೆ ಮೊಕದ್ದಮೆ ಹೂಡಿದ್ದರು. ಈ ಸಂದರ್ಭ ಅವರು ತಮ್ಮ ಹಾಗೂ ಅರ್ಜಿದಾರರ ನಡುವಿನ ಸಂಭಾಷಣೆಯ ರೆಕಾರ್ಡಿಂಗ್ ಅನ್ನು ಸಾಕ್ಷ್ಯವಾಗಿ ನೀಡಿದ್ದರು. ಇದನ್ನು ಗಮನಿಸಿದ ಕೌಟುಂಬಿಕ ನ್ಯಾಯಾಲಯ ಒಪ್ಪಿಕೊಂಡಿತ್ತು. ಓರ್ವ ವ್ಯಕ್ತಿಯ ಖಾಸಗಿತನದ ಹಕ್ಕನ್ನು ಹೇಗೆ ಉಲ್ಲಂಘಿಸಬಹುದು" ಎಂದು ಪಂಜಾಬ್ ಹಾಗೂ ಹರಿಯಾಣ ಹೈಕೋರ್ಟ್ ಕೇಳಿದೆ.
"ಸಂಗಾತಿಯೊಂದಿಗೆ ಆಕೆಯ ಒಪ್ಪಿಗೆ ಇಲ್ಲದೇ ಫೋನ್ ಸಂಭಾಷಣೆಯನ್ನು ರೆಕಾರ್ಡ್ ಮಾಡುವುದು ಅವರ ಗೌಪ್ಯತೆಯ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ. ಆರು ತಿಂಗಳೊಳಗೆ ವಿಚ್ಛೇದನ ಪ್ರಕರಣದ ಬಗ್ಗೆ ತೀರ್ಮಾನ ಕೈಗೊಳ್ಳುವಂತೆ ಬಟಿಂಡಾ ಅವರ ಕೌಟುಂಬಿಕ ನ್ಯಾಯಾಲಯಕ್ಕೆ ಹೈಕೋರ್ಟ್ ಆದೇಶಿಸಿದ್ದು, ಫೋನ್ ರೆಕಾರ್ಡಿಂಗ್ಗಳನ್ನು ಸಾಕ್ಷ್ಯವಾಗಿ ಪರಿಗಣಿಸುವುದಿಲ್ಲ" ಎಂದಿದೆ.
"ಖಾಸಗಿತನವು ಮಾನವ ಘನತೆಯ ಸಾಂವಿಧಾನಿಕ ತಿರುಳು ಎಂದು ತೀರ್ಪು ಹೇಳಿದೆ. ಆರ್ಟಿಕಲ್ 21 ರ ಅಡಿಯಲ್ಲಿ ಖಾಸಗಿತನದ ಹಕ್ಕನ್ನು ಜೀವಿಸುವ ಹಕ್ಕಿನ ಅತ್ಯಗತ್ಯ ಅಂಶವೆಂದು ಗುರುತಿಸಲಾಗಿದೆ" ಎಂದಿದೆ.