ರಾಯಚೂರು, ಡಿ.11 (DaijiworldNews/HR): ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಯಾಟಗಲ್ ಗ್ರಾಮದಲ್ಲಿ ನಿಧಿಯಾಸೆಗೆ ಬಿದ್ದು ನಿತ್ಯ ಪೂಜೆ ಸಲ್ಲುತ್ತಿದ್ದ ಶ್ರೀಕೃಷ್ಣನ ಪುಟ್ಟ ದೇಗುಲವನ್ನು ಧ್ವಂಸ ಮಾಡಿರುವ ಘಟನೆ ನಡೆದಿದೆ.
ಯಾಟಗಲ್ ಗ್ರಾಮದ ಸರ್ಕಾರಿ ಶಾಲೆ ಪಕ್ಕದಲ್ಲಿರುವ ಶ್ರೀ ಕೃಷ್ಣನ ದೇಗುಲದವಿಗ್ರಹದ ಕೆಳಗೆ ನಿಧಿ ಇರುವುದಾಗಿ ಪ್ರತೀತಿ ಇರುವ ಕಾರಣದಿಂದ ಇದರ ಮೇಲೆ ದುಷ್ಕರ್ಮಿಗಳು ಕೆಟ್ಟ ಕಣ್ಣು ಹಾಕಿದ್ದು, ಶುಕ್ರವಾರ ತಡ ರಾತ್ರಿ ಎದೆಯೆತ್ತರ ಗುಂಡಿ ತೋಡಿ ಪೂಜಾ ಸ್ಥಳವನ್ನು ಭಗ್ನಗೊಳಿಸಿದ್ದಾರೆ.
ಇನ್ನು ಇಂದು ಬೆಳಿಗ್ಗೆ ಪೂಜೆಗೆಂದು ಬಂದ ಗ್ರಾಮಸ್ಥರು ದೇವರ ವಿಗ್ರಹ ಮತ್ತು ಪಾದಗಳು ನೆಲದ ಮೇಲೆ ಬಿದ್ದಿರುವುದನ್ನು ಕಂಡಿದ್ದಾರೆ.
ಈ ಬಗ್ಗೆ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ.