ಬೆಂಗಳೂರು, ಡಿ.11 (DaijiworldNews/HR): ಕಾಂಗ್ರೆಸ್ ಒಂದು ವಿರೋಧ ಪಕ್ಷವಾಗಿದ್ದು, ಎಲ್ಲದಕ್ಕೂ ವಿರೋಧ ಮಾಡುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.
ಮತಾಂತರ ನಿಷೇಧ ಮಸೂದೆ ಮಂಡನೆಗೆ ಕಾಂಗ್ರೆಸ್ ವಿರೋಧ ವಿಚಾರಕ್ಕೆ ತಿರುಗೇಟು ನೀಡಿರು ಸಿಎಂ, "ಕಾಂಗ್ರೆಸ್ ಒಂದು ವಿರೋಧ ಪಕ್ಷವಾಗಿದ್ದು, ಎಲ್ಲದಕ್ಕೂ ವಿರೋಧ ಮಾಡುತ್ತಾರೆ" ಎಂದಿದ್ದಾರೆ.
ಇನ್ನು ವಿಮಾನ ನಿಲ್ದಾಣದಲ್ಲಿ ಕೊರೊನಾ ಪರೀಕ್ಷೆಗೆ ದುಬಾರಿ ಹಣವನ್ನು ಸಮರ್ಥಿಸಿಕೊಂಡ ಅವರು, "ತಂತ್ರಜ್ಞಾನ ಆಧಾರಿತ ಟೆಸ್ಟ್ ಮಾಡುತ್ತಿದ್ದು, ದರ ಸ್ವಲ್ಪ ಹೆಚ್ಚಿದೆ. ಕಿಟ್ ಟೆಸ್ಟ್ ಗೆ ವಿಶೇಷ ಸಲಕರಣೆಗಳ ಬಳಕೆ ಮಾಡ್ತಾರೆ. ನಮ್ಮಲ್ಲೇ ದರ ಕಡಿಮೆಯಿದೆ. ತಮಿಳುನಾಡಿನಲ್ಲಿ ನಮಗಿಂತಲೂ ಜಾಸ್ತಿಯಿದೆ" ಎಂದರು.