ಮುಂಬೈ, ಡಿ.11 (DaijiworldNews/PY): "ಓಮೈಕ್ರಾನ್ ತಡೆಗಟ್ಟಲು ಹಾಗೂ ಕಾನೂನು ಸುವವ್ಯಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಮುಂಬೈ ನಗರದಲ್ಲಿ ಎರಡು ದಿನಗಳ ಕಾಲ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ಹೇರಲಾಗಿದೆ" ಎಂದು ಅಧಿಕಾರಿಗಳು ಹೇಳಿದ್ದಾರೆ.
"ಶನಿವಾರ ಹಾಗೂ ಭಾನುವಾರದಂದು ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಈ ಸಂದರ್ಭ ಜನರು ಗುಂಪು ಸೇರುವುದು, ಪ್ರತಿಭಟನೆಗಳನ್ನು ನಡೆಸುವುದು ಹಾಗೂ ರ್ಯಾಲಿಗಳನ್ನು ಮಾಡುವಂತಿಲ್ಲ" ಎಂದು ಡಿಸಿಪಿ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.
"ನಿಷೇಧಾಜ್ಞೆ ಉಲ್ಲಂಘಿಸುವವರನ್ನು ಭಾರತೀಯ ದಂಡಸಂಹಿತೆಯ ಸೆಕ್ಷನ್ 188ರ ಅಡಿಯಲ್ಲಿ ಶಿಕ್ಷೆಗೆ ಗುರಿಪಡಿಸಲಾಗುವುದು" ಎಂದು ಎಚ್ಚರಿಸಲಾಗಿದೆ.
"ಓಮೈಕ್ರಾನ್ ನಿಯಂತ್ರಣ, ಅಮರಾವತಿ, ಮಾಲೆಗಾಂವ್ ಹಾಗೂ ನಾಂದೇಡ್ನಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರದ ಪರಿಣಾಮ ನಗರದಲ್ಲಿ ಶಾಂತಿ ಸುವವ್ಯಸ್ಥೆಗೆ ಭಂಗ ಬಾರದಂತೆ ನೋಡಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ" ಎಂದು ಆದೇಶದಲ್ಲಿ ತಿಳಿಸಲಾಗಿದೆ.