ನವದೆಹಲಿ, ಡಿ 11 (DaijiworldNews/MS): ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕುನೂರು ಬಳಿ ಸಂಭವಿಸಿದ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ನಾಲ್ವರು ಭಾರತೀಯ ವಾಯುಪಡೆಯ ಸಿಬ್ಬಂದಿ ಗುರುತು ಪತ್ತೆ ಕಾರ್ಯ ಪೂರ್ಣವಾಗಿದೆ.
ಮೃತಪಟ್ಟ ವಾಯುಪಡೆ ಅಧಿಕಾರಿಗಳನ್ನು ಜೆಡಬ್ಲ್ಯುಒ ಪ್ರದೀಪ್ ಎ, ವಿಂಗ್ ಕಮಾಂಡರ್ ಪಿ ಎಸ್ ಚೌಹಾನ್, ಜೆಡಬ್ಲ್ಯುಒ ರಾಣಾ ಪ್ರತಾಪ್ ದಾಸ್ ಮತ್ತು ಸ್ಕ್ರ್ವಾಡ್ರ್ ಲೀಡರ್ ಕುಲದೀಪ್ ಸಿಂಗ್ ಎಂದು ಡಿಎನ್ ಎ ಪರೀಕ್ಷೆ ಮೂಲಕ ಗುರುತು ಹಚ್ಚಲಾಗಿದೆ.
ಸಿಬ್ಬಂದಿಗಳ ಪಾರ್ಥಿವ ಶರೀರವನ್ನು ಇಂದು ಬೆಳಿಗ್ಗೆ ಕುಟುಂಬ ಸದಸ್ಯರಿಗೆ ಹಸ್ತಾಂತರಲಿಸಲಾಗಿದ್ದು ಪಾರ್ಥಿವ ಶರೀರಗಳನ್ನು ಮಿಲಿಟರಿ ಗೌರವದೊಂದಿಗೆ ಅಂತಿಮ ವಿಧಿವಿಧಾನಗಳಿಗಾಗಿ ವಿಮಾನದ ಮೂಲಕ ಅವರವರ ಊರುಗಳಿಗೆ ಕೊಂಡೊಯ್ಯಲಾಗುತ್ತದೆ ಎಂದೂ ಅಧಿಕಾರಿಗಳು ಹೇಳಿದರು.