ತಿರುವನಂತಪುರಂ, ಡಿ.11 (DaijiworldNews/PY): ಕೇರಳದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗಿದ್ದರಿಂದ ಶಬರಿಮಲೆ ದೇವಾಲಯಕ್ಕೆ ತೆರಳಲು ಮತ್ತೆ ಅವಕಾಶ ಸಿಕ್ಕಿದೆ.
ಕೊರೊನಾ ಪ್ರಕರಣಗಳ ಸಂಖ್ತೆ ಇಳಿಕೆಯಾದ ಹಿನ್ನೆಲೆ ಅಯ್ಯಪ್ಪಸ್ವಾಮಿ ಸನ್ನಿಧಿಗೆ ತೆರಳುವುದಕ್ಕೆ ಮಾರ್ಗ ಓಪನ್ ಆಗಿದ್ದು, ಪಂಪಾದಿಂದ ನೀಲಿಮಲ ಮಾರ್ಗದಲ್ಲಿ ತೆರಳಲು ಅವಕಾಶ ನೀಡಲಾಗುತ್ತಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ಮಾರ್ಗ ಮಧ್ಯೆ ಆರೋಗ್ಯ ತಪಾಸಣೆಗೆ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಕೇರಳ ಸಿಎಂ ಕಚೇರಿಯಿಂದ ಅಧಿಕೃತ ಮಾಹಿತಿ ಲಭ್ಯವಾಗಿದೆ.
ಕಳೆದ ವರ್ಷ ಶಬರಿಮಲೆಗೆ ಹೋಗಲು ಸಾಧ್ಯವಾಗದ ಕಾರಣ ಭಕ್ತರು ಬೇರೆ ಮಾರ್ಗ ಕಂಡುಕೊಂಡಿದ್ದರು. ಇರುಮುಡಿ ಹೊತ್ತು ಮಾಲಾಧಾರಿಗಳು ಕೋಟೆನಾಡಿಗೆ ಆಗಮಿಸುತ್ತಿದ್ದರು. ಚಿತ್ರದುರ್ಗ ನಗರದ ಮೆದೇಹಳ್ಳಿ ರಸ್ತೆಯಲ್ಲಿರುವ ಅಯ್ಯಪ್ಪಸ್ವಾಮಿ ದೇಗುಲದಲ್ಲಿ ಶಬರಿಮಲೆ ಮಾದರಿಯಲ್ಲಿಯೇ 18 ಮೆಟ್ಟಿಲುಗಳನ್ನು ಏರಿ ದೇವರ ಆಶೀರ್ವಾದ ಪಡೆಯುತ್ತಿದ್ದರು.