ಚಂಡೀಗಢ, ಡಿ.11 (DaijiworldNews/PY): "ಬಯಲು ಜಾಗದಲ್ಲಿ ನಮಾಜ್ ಮಾಡುವ ಅಭ್ಯಾಸವನ್ನು ಸಹಿಸುವುದಿಲ್ಲ" ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ತಿಳಿಸಿದ್ದಾರೆ.
"ಬಯಲು ಸೀಮೆಯಲ್ಲಿ ಪ್ರಾರ್ಥನೆ ನಡೆಸಲು ಕೆಲವು ಸ್ಥಳಗಳನ್ನು ಮೀಸಲಿಡುವ ಜಿಲ್ಲಾಡಳಿತದ ಹಿಂದಿನ ತೀರ್ಮಾನವನ್ನು ಹಿಂಪಡೆಯಲಾಗಿದೆ. ಈ ಸಮಸ್ಯೆಗೆ ಈ ರಾಜ್ಯ ಸರ್ಕಾರವು ಸೌಹಾರ್ದಯುತ ಪರಿಹಾರವನ್ನು ರೂಪಿಸಲಿದೆ" ಎಂದಿದ್ದಾರೆ.
"ಮಹಿಳೆಯರಿಗೆ ಸ್ಥಳಿಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾದ ಸ್ಥಾನಗಳ ಅಧಿಕಾವಧಿಯನ್ನು ಹೆಚ್ಚಿಸಲು ಅನಮೋದನೆ ನೀಡಿದ ಅಸ್ಸಾಂ ಕ್ಯಾಬಿನೆಟ್ನಂತಹ ಆಚರಣೆಯಲ್ಲಿ ತೊಡಗುವ ಮೂಲಕ ಇತರ ಜನರ ಹಕ್ಕುಗಳನ್ನು ಉಲ್ಲಂಘನೆ ಮಾಡಬೇಡಿ" ಎಂದು ಹೇಳಿದ್ದಾರೆ.
ಗುರುಗ್ರಾಮ್ನಲ್ಲಿ ತೆರೆದ ಜಾಗದಲ್ಲಿ ನಮಾಜ್ ಮಾಡಲು ಹಲವು ಬಲಪಂಥೀಯ ಸಂಘಟನೆಗಳು ಆಕ್ಷೇಪ ಎತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, "ಗುರ್ಗಾಂವ್ ಬಯಲು ಜಾಗದಲ್ಲಿ ನಮಾಜ್ ಮಾಡುವ ಅಭ್ಯಾಸವನ್ನು ಸಹಿಸಲಾಗುವುದಿಲ್ಲ. ಪ್ರತಿಯೋರ್ವರು ಸೌಲಭ್ಯವನ್ನು ಪಡೆಯಬೇಕು. ಆದರೆ, ಯಾರೂ ಇತರರ ಹಕ್ಕುಗಳನ್ನು ಉಲ್ಲಂಘಿಸಬಾರದು" ಎಂದಿದ್ದಾರೆ.