ನವದೆಹಲಿ, ಡಿ 11 (DaijiworldNews/MS): ಬರೋಬ್ಬರಿ 4 ದಶಕಗಳಿಂದ ಬಾಕಿಯಾಗಿದ್ದ ರೈತರ ಕಲ್ಯಾಣ ಹಾಗೂ ಸಬಲೀಕರಣಕ್ಕೆ 1978ರ ಕೈಗೆತ್ತಿಕೊಂಡ ಉತ್ತರ ಪ್ರದೇಶ ನದಿ ಜೋಡಣೆ ಯೋಜನೆ ಹಲವು ಕಾರಣಗಳಿಂದ ಬಾಕಿಯಾಗಿದ್ದು, ಕೊನೆಗೆ ಇಂದು ಮಧ್ಯಾಹ್ನ 1 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.
ಬಜೆಟ್ ಬೆಂಬಲ, ಅಂತರ ಇಲಾಖೆಗಳ ಸಮನ್ವಯ ಮತ್ತು ಸಾಕಷ್ಟು ಮೇಲ್ವಿಚಾರಣೆಯ ನಿರಂತರತೆಯ ಕೊರತೆಯಿಂದ ಈ ಯೋಜನೆ ಕಳೆದ ನಾಲ್ಕು ದಶಕಗಳಿಂದ ಬಾಕಿಯಾಗಿಯೇ ಉಳಿದಿತ್ತು. ಆದರೆ ರೈತರ ಕಲ್ಯಾಣ ಮತ್ತು ಸಬಲೀಕರಣಕ್ಕಾಗಿ ದೂರದೃಷ್ಟಿ ಮತ್ತು ರಾಷ್ಟ್ರೀಯ ಪ್ರಾಮುಖ್ಯತೆಯ ದೀರ್ಘಾವಧಿಯ ಯೋಜನೆಗಳಿಗೆ ಆದ್ಯತೆ ನೀಡುವ ದೃಷ್ಟಿಯ ಪ್ರಧಾನ ಮಂತ್ರಿ ಬದ್ಧತೆಯು ಈ ಯೋಜನೆಯ ಮೇಲೆ ಹೆಚ್ಚು ಅಗತ್ಯವನ್ನು ಮನಗಂಡಿತು. ಇದರ ಪರಿಣಾಮವಾಗಿ 2016 ರಲ್ಲಿ, ಯೋಜನೆಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವ ಗುರಿಯೊಂದಿಗೆ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಡಿಯಲ್ಲಿ ತರಲಾಯಿತು
ಹೀಗಾಗಿ ಆದರೆ ಕಳೆದ ನಾಲ್ಕು ವರ್ಷಗಳಲ್ಲಿ ಇದೇ ಯೋಜನೆ ಕೈಗೆತ್ತಿಕೊಂಡ ಕೇಂದ್ರ ಸರ್ಕಾರ ಯೋಜನೆ ಪೂರ್ಣಗೊಳಿಸಿದೆ. ಘಘರಾ, ಸರಯು, ರಪ್ತಿ, ಬಾನ್ ಗಂಗಾ ಮತ್ತು ರೋಹಿಣಿ ನದಿಗಳ ಅಂತರ ಜೋಡಣೆಯನ್ನು ಯಶಸ್ವಿಯಾಗಿ ಮಾಡಿಮುಗಿಸಿದೆ.ಈ ಯೋಜನೆಯಂದು ಸುಮಾರು 14 ಲಕ್ಷ ಹೆಕ್ಟರ್ ಭೂಮಿಗೆ ನೀರಾವರಿ ಸೌಲಭ್ಯವನ್ನು ಒದಗಿಸಿದಂತಾಗುತ್ತದೆ. ಅಲ್ಲದೆ 6200 ಗ್ರಾಮಗಳ ಸುಮಾರು 29 ಲಕ್ಷ ರೈತರಿಗೆ ಇದರಿಂದ ಅನುಕೂಲವಾಗಲಿದೆ. ಈ ಯೋಜನೆ ಪೂರ್ವ ಉತ್ತರ ಪ್ರದೇಶದ 9 ಜಿಲ್ಲೆಗಳಿಗೆ ಪ್ರಯೋಜನಕಾರಿಯಾಗಿದೆ.
ಈ ಯೋಜನೆಯ ಉದ್ಘಾಟನೆಗಾಗಿ ಇಂದು ಪ್ರ ಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಬಲರಾಂಪುರಕ್ಕೆ ಭೇಟಿ ನೀಡಲಿದ್ದು, ಮಧ್ಯಾಹ್ನ 1 ಗಂಟೆಗೆ ಸರಯು ನಹರ್ ರಾಷ್ಟ್ರೀಯ ಯೋಜನೆಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ.