ರಾಮನಗರ, ಡಿ.10 (DaijiworldNews/HR): ಬೆಂಬಲ ಕೊಟ್ಟಂತೆ ನಾಟಕವಾಡಿ ಕುತ್ತಿಗೆ ಕೊಯ್ಯುವುದೇ ಕಾಂಗ್ರೆಸ್ ಕೆಲಸವಾಗಿದೆ ಎಂದು ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಹೆಚ್.ಡಿ.ದೇವೇಗೌಡರನ್ನು ಪ್ರಧಾನಿ ಮಾಡಿದ್ದೇ ಕಾಂಗ್ರೆಸ್ ಎಂದು ಹೇಳುತ್ತಾರೆ. ದೇವೇಗೌಡರು ಕಾಂಗ್ರೆಸ್ ನಿಂದ ಅರ್ಜಿ ಹಿಡಿದುಕೊಂಡು ಹೋಗಿದ್ರಾ? ನಾನು ಸಿಎಂ ಆಗುವಾಗ ನಾನೇನಾದ್ರೂ ಕಾಂಗ್ರೆಸ್ ಬಳಿ ಅರ್ಜಿ ಹಿಡಿದು ಹೋಗಿದ್ನಾ? ನಮ್ಮ ಪಕ್ಷಕ್ಕೆ ಬೆಂಬಲ ಕೊಟ್ಟಂತೆ ಮಾಡಿ ಕುತ್ತಿಗೆ ಕೊಯ್ಯುವುದು ಅವರ ಕೆಲಸ" ಎಂದರು.
ಇನ್ನು ಪರಿಷತ್ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳನ್ನು ಬೆಂಬಲಿಸಿ ಎಂದು ಯಡಿಯೂರಪ್ಪ ಮನವಿ ಮಾಡಿದ್ದರು. ಅದು ಅವರ ದೊಡ್ಡತನ. ಬಳಿಕ ನನ್ನ ನಿರ್ಧಾರವನ್ನು ಅವರು ಸ್ವಾಗತಿಸಿ, ಅಭಿನಂದಿಸಿದರು" ಎಂದಿದ್ದಾರೆ.
ಮುಂದಿನ 2023ರ ಚುನಾವಣೆಯಲ್ಲಿ ನಾವು ಸ್ವತಂತ್ರವಾಗಿ ಅಧಿಕಾರಕ್ಕೆ ಬರಬೇಕು ಎಂಬುದು ನಮ್ಮ ಗುರಿ. ಈ ನಿಟ್ಟಿನಲ್ಲಿ ನಮ್ಮ ಹೋರಾಟ ನಡೆಯಲಿದೆ ಎಂದು ಹೇಳಿದ್ದಾರೆ.