ಶಿವಮೊಗ್ಗ, ಡಿ 10(DaijiworldNews/MS): ದಕ್ಷಿಣ ಕನ್ನಡ ಜಿಲ್ಲೆ ಸೇರಿ ಹಲವೆಡೆ ಲವ್ ಜಿಹಾದ್ ಗೆ ಹೆಣ್ಣುಮಕ್ಕಳು ಬಲಿಯಾಗಿದ್ದಾರೆ. ಒಂದು ಧರ್ಮವನ್ನು ದೃಷ್ಟಿಯಲ್ಲಿಟ್ಟುಕೊಂಡೇ ಈ ಮತಾಂತರ ನಿಷೇಧ ಕಾಯ್ದೆ ತರುತ್ತಿರುವುದು. ಆ ಧರ್ಮದವರು ಹಿಂದೂ ಹೆಣ್ಣುಮಕ್ಕಳು, ಬಡ ಹಿಂದು ಜನರ ಮೇಲೆ ಕಣ್ಣಿಟ್ಟು, ಆಮಿಷವೊಡ್ಡಿಮತಾಂತರ ಮಾಡುತ್ತಿರುವುದು. ಇದು ಡಿ ಕೆ ಶಿವಕುಮಾರ್ ಅವರಿಗೆ ಗೊತ್ತಿಲ್ಲದಿದ್ದರೆ ಎಲ್ಲೆಲ್ಲಿ ಮತಾಂತರ ಮಾಡಿ ಹಿಂದೂ ಹೆಣ್ಣು ಮಕ್ಕಳನ್ನು ಮೋಸ ಮಾಡಿದ್ದಾರೆ ಎಂಬುದನ್ನು ನಾನೇ ಕರೆದುಕೊಂಡು ಹೋಗಿ ತೋರಿಸುತ್ತೇನೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಮತಾಂತರ ನಿಷೇಧ ಕಾಯ್ದೆ ಜಾರಿಗೆ ವಿರೋಧ ಮಾಡುತ್ತೇವೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ನಡೆಯುತ್ತಿವ ಮತಾಂತರದ ದಂಧೆ ಬಗ್ಗೆ ಡಿಕೆಶಿ ಅವರಿಗೆ ನೇರವಾಗಿ ವೀರಶೈವ ಸಮಾಜದವರೇ ಹೇಳಿದ್ದಾರೆ ಆದರೆ ಡಿಕೆಶಿ ಕೇವಲ ಇದೆಲ್ಲವನ್ನೂ ಓಟಿನ ಲೆಕ್ಕವಾಗಿ ನೋಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಡಿಕೆಶಿಯವರು ಓಟಿಗೋಸ್ಕರ ಮಾಡುತ್ತಿರುವ ಕೆಟ್ಟ ರಾಜಕಾರಣವಾಗಿದೆ. ಅವರು ನೀವು ಎಷ್ಟೇ ವಿರೋಧ ಮಾಡಿದರೂ , ರಾಜ್ಯದಲ್ಲಿ ಈ ಧರ್ಮವನ್ನು ಉಳಿಸುವ, ನಮ್ಮ ಸಹೋದರರನ್ನು ರಕ್ಷಿಸುವ ಪೂರ್ಣ ಬಹುಮತ ಬಿಜೆಪಿಗೆ ಇದೆ. ನಾವು ಇದನ್ನು ವಿಧಾನಸಭೆಯಲ್ಲಿ ಕಾಯ್ದೆಯನ್ನು ಪಾಸ್ ಮಾಡುತ್ತೇವೆ. ಇದು ಮಾತ್ರವಲ್ಲ ರಾಜ್ಯದಲ್ಲಿ ಭಾರತೀಯ ಸಂಸ್ಕೃತಿ ಉಳಿಸುವ ಅನೇಕ ಕಾಯ್ದೆ ತರುತ್ತೇವೆ ಎಂದು ಹೇಳಿದರು.