ಬೆಂಗಳೂರು, ಡಿ.10 (DaijiworldNews/HR): ಕಾಂಗ್ರೆಸ್ ಪಕ್ಷವು ಮತಾಂತರ ನಿಷೇಧ ಕಾಯ್ದೆಗೆ ವಿರೋಧ ವ್ಯಕ್ತಪಡಿಸುವುದರಲ್ಲಿ ನಮಗೇನು ಆಶ್ಚರ್ಯವಿಲ್ಲ. ಏಕೆಂದರೆ ಅವರಿಗೆ ದೇಶದ ಬಗ್ಗೆ ಯವತ್ತೂ ಗೌರವವೂ ಇಲ್ಲ. ಪ್ರೀತಿಯೂ ಇಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಸೋಮವಾರದಿಂದ ಪ್ರಾರಂಭವಾಗಲಿರುವ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ಮಂಡಿಸುವ ಸುಳಿವು ನೀಡಿರುವ ಅವರು, ಕೆಲವು ಲಿಂಗಾಯತರು ಕೂಡ ಮತಾಂತರ ಆಗಿದ್ದಾರೆಂದು ಹೇಳಲಾಗಿದ್ದು, ಬೋವಿ ಸಮಾಜದ ಸ್ವಾಮೀಜಿ ಕೂಡ ಧ್ವನಿ ಎತ್ತಿದ್ದಾರೆ. ಹಣದ ಆಸೆಗೆ ಆಮಿಷಕ್ಕೊಳಗಾಗಿ ಮತಾಂತರವಾಗುತ್ತಿದ್ದಾರೆ. ಇದು ಕಾನೂನಿನಲ್ಲಿ ಅಪರಾಧ ಸ್ವಯಂಪ್ರೇರಿತರಾಗಿ ಒಂದು ಪರ್ಸೆಂಟ್ ಜನ ಮತಾಂತರಗೊಂಡಿದ್ದಾರೆ ಅಷ್ಟೇ. ಉಳಿದವರು ಆಮಿಷಕ್ಕೊಳಗಾಗಿರುವವರೇ ಹೆಚ್ಚು. ಇದನ್ನು ಮಟ್ಟ ಹಾಕಬೇಕಿದೆ" ಎಮ್ದರು.
ಇನ್ನು ನಿಗದಿಯಂತೆ ಎರಡುವಾರ ಅಧಿವೇಶನ ನಡೆಯುಲಿದ್ದು, ಒಂದು ವಾರಕ್ಕೆ ಮೊಟಕುಗೊಳಿಸುವ ಪ್ರಶ್ನೆಯೇ ಇಲ್ಲ. ಎಲ್ಲರಿಗೂ ಎರಡು ಡೋಸ್ ಲಸಿಕೆ ಕಡ್ಡಾಯ ಮಾಡಿದ್ದೇವೆ. ನಾವು ಎರಡು ವಾರ ಅಧಿವೇಶನ ಮಾಡುತ್ತಿದೇವೆ. ಅಧಿವೇಶನ ಪೂರ್ಣ ಪ್ರಮಾಣದಲ್ಲಿ ನಡೆಯುತ್ತದೆ" ಎಂದು ತಿಳಿಸಿದ್ದಾರೆ.