ಬೆಂಗಳೂರು, ಡಿ 10(DaijiworldNews/MS): ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ನ 25 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಗೆ ಮತದಾನ ನಡೆಯಲಿದ್ದು, 20 ಕ್ಷೇತ್ರಗಳ ಒಟ್ಟು 99 ಸಾವಿರ ಮತದಾರರು ಕಣದಲ್ಲಿರುವ 90 ಅಭ್ಯರ್ಥಿಗಳ ಭವಿಷ್ಯ ಇಂದು ಬರೆಯಲಿದ್ದಾರೆ. ಈ ಚುನಾವಣೆಯೂ ಮೂರೂ ರಾಜಕೀಯ ಪಕ್ಷಗಳಿಗೆ ಸಂಖ್ಯಾಬಲ ಮತ್ತು ಪಕ್ಷ ಸಂಘಟನೆ ದೃಷ್ಟಿಯಿಂದ ಮುಖ್ಯವಾಗಿದೆ.
ಆಡಳಿತಾರೂಢ ಬಿಜೆಪಿಗೆ ವಿಧಾನ ಪರಿಷತ್ ಚುನಾವಣೆ ಪ್ರತಿಷ್ಠೆಯಾಗಿದ್ದರೆ, ಮೇಲ್ಮನೆಯಲ್ಲಿ ಹೆಚ್ಚು ಸದಸ್ಯರನ್ನು ಹೊಂದಿರುವ ಕಾಂಗ್ರೆಸ್ಗೂ ಮುಂದಿನ ರಾಜಕೀಯ ಲೆಕ್ಕಾಚಾರಗಳಿಗಾಗಿ ಈ ಚುನಾವಣೆ ಸವಾಲಾಗಿದೆ. ಇನ್ನು ಈ ನಡುವೆ ಜೆಡಿಎಸ್ಗೆ ಅಸ್ತಿತ್ವದ ಪ್ರಶ್ನೆಯಾಗಿ ಉಳಿದಿದೆ.
ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ತಲಾ 20 ಕ್ಷೇತ್ರಗಳಲ್ಲಿ ಸ್ಪರ್ಧಿಸಿವೆ. ಜೆಡಿಎಸ್ 6 ಕಡೆ ಅದೃಷ್ಟ ಪರೀಕ್ಷೆಗೆ ಮುಂದಾಗಿದೆ. ಜೆಡಿಎಸ್ ಅಭ್ಯರ್ಥಿಗಳಿರುವ 6 ಕ್ಷೇತ್ರಗಳಲ್ಲಿ ಮಾತ್ರ ತ್ರಿಕೋನ ಸ್ಪರ್ಧೆಯಿದೆ. ಉಳಿದ ಕಡೆ ಬಿಜೆಪಿ, ಕಾಂಗ್ರೆಸ್ ನಡುವೆ ನೇರ ಸ್ಪರ್ಧೆಯಿದೆ.
ಬಿಜೆಪಿ ಪ್ರಸ್ತುತ ವಿಧಾನಪರಿಷತ್ನಲ್ಲಿ 32 ಸಂಖ್ಯಾಬಲ ಹೊಂದಿದ್ದು, ಬಹುಮತಕ್ಕೆ 38 ಸ್ಥಾನ ಬೇಕಿದೆವಿಪಕ್ಷ ಕಾಂಗ್ರೆಸ್ 29 ಸಂಖ್ಯಾಬಲ ಹೊಂದಿದ್ದು, ಇದು ಕುಸಿಯದಂತೆ ನೋಡಿಕೊಳ್ಳಲು ಹರಸಾಹಸ ಪಡುತ್ತಿದೆ. ಜೆಡಿಎಸ್ ಪ್ರಸ್ತುತ 12 ಸಂಖ್ಯಾಬಲ ಹೊಂದಿದೆ.
>ಬೆಳಿಗ್ಗೆ 8ರಿಂದ ಸಂಜೆ 4ರ ತನಕ ಮತದಾನ ನಡೆಯಲಿದೆ. ಕಣದಲ್ಲಿ 89 ಪುರುಷರು, ಒಬ್ಬ ಮಹಿಳೆ ಇದ್ದಾರೆ. ಇವರಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ನ ತಲಾ 20, ಜೆಡಿಎಸ್ನ 6, ಇತರ ಪಕ್ಷಗಳ 11 ಹಾಗೂ ಪಕ್ಷೇತರರು 33 ಮಂದಿ ಅಭ್ಯರ್ಥಿಗಳು ಇದ್ದಾರೆ.