ನವದೆಹಲಿ, ಡಿ.09 (DaijiworldNews/SM): ತಮಿಳುನಾಡಿನಲ್ಲಿ ನಡೆದ ಹೆಲಿಕಾಪ್ಟರ್ ಅವಘಡದಲ್ಲಿ ಹುತಾತ್ಮರಾದ ಸೇನೆಯ ಮೂರೂ ವಿಭಾಗಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರ ಪಾರ್ಥೀವ ಶರೀರ ಇಂದು ಸಂಜೆ ದೆಹಲಿ ತಲುಪಿದೆ.
ಹುತಾತ್ಮರಾದ ಬಿಪಿನ್ ರಾವತ್ ಸೇರಿದಂತೆ ಅವರ ಪತ್ನಿ ಮಧುಲಿಕ ರಾವತ್ ಹಾಗೂ ಇತರ 11 ಮಂದಿಯ ಪಾರ್ಥೀವ ಶರೀರಕ್ಕೆ ಪುಷ್ಪ ನಮನ ಸಲ್ಲಿಸಿ ಪ್ರಧಾನಿ ನರೇಂದ್ರ ಮೋದಿ ಅಂತಿಮ ದರ್ಶನ ಪಡೆದಿದ್ದಾರೆ.
ತಮಿಳುನಾಡಿನಿಂದ ಇಂದು ಸಂಜೆ ಪಾರ್ಥೀವ ಶರೀರಗಳನ್ನು ದೆಹಲಿ ಪಾಲಮ್ ಏರ್ ಬೇಸ್ ಗೆ ರವಾನಿಸಲಾಗಿತ್ತು. ಇಲ್ಲಿ ಪ್ರಧಾನಿ ನರೇಂದ್ರ ಮೋದಿ ಅಂತಿಮ ದರ್ಶನ ಪಡೆದರು. ಇನ್ನು ಸೇನೆಯ ಸಕಲ ಸರಕಾರಿ ಗೌರವಗಳೊಂದಿಗೆ ಪಾರ್ಥೀವ ಶರೀರಗಳ ಅಂತ್ಯಕ್ರಿಯೆ ನಡೆಯಲಿದೆ.