ಬೆಂಗಳೂರು, ಡಿ.09 (DaijiworldNews/PY): "ಯಾರನ್ನು ಮೆಚ್ಚಿಸಲು ಒಬ್ಬ ಹಿರಿಯ ನಾಯಕನನ್ನು ರಾಜಕೀಯ ಸಂಧ್ಯಾಕಾಲದಲ್ಲಿ ಅತಂತ್ರವಾಗಿ ಮಾಡಿದಿರಿ?" ಎಂದು ಬಿಜೆಪಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನು ಪ್ರಶ್ನಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ, "ಡಿ.ಕೆ. ಶಿವಕುಮಾರ್ ಅವರೇ, ಎಸ್. ಆರ್. ಪಾಟೀಲರ ಸಾತ್ವಿಕ ಸಿಟ್ಟು ನಿಮ್ಮನ್ನು ಬಿಡುವುದೇ? ಪಾಟೀಲರ ಮೌನ ನಿಮಗೆ ಶಾಪವಾಗಿ ಪರಿಣಮಿಸುವುದರಲ್ಲಿ ಅನುಮಾನವಿದೆಯೇ? ಯಾರನ್ನು ಮೆಚ್ಚಿಸಲು ಒಬ್ಬ ಹಿರಿಯ ನಾಯಕನನ್ನು ರಾಜಕೀಯ ಸಂಧ್ಯಾಕಾಲದಲ್ಲಿ ಅತಂತ್ರವಾಗಿ ಮಾಡಿದಿರಿ?" ಎಂದು ಕೇಳಿದೆ.
"ಹಿರಿಯ ನಾಯಕ ಬಿಎಸ್ವೈ ಅವರಿಗೆ ಬಿಜೆಪಿ ಕಣ್ಣೀರು ಬರಿಸಿದೆ ಎಂದು ಸುಳ್ಳು ಆರೋಪ ಮಾಡುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರೇ, ಅಘೋಷಿತ ಕೆಪಿಸಿಸಿ ಅಧ್ಯಕ್ಷೆಯನ್ನು ಮೆಚ್ಚಿಸಲು ಆಕೆಯ ಸಹೋದರನಿಗೆ ಪರಿಷತ್ ಟಿಕೆಟ್ ನೀಡಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಎಸ್. ಆರ್. ಪಾಟೀಲ್ ಅವರಲ್ಲಿ ಮೌನ ಕಣ್ಣೀರು ತರಿಸಿದ್ದು ಯಾರು?" ಎಂದು ಪ್ರಶ್ನಿಸಿದೆ.
"ಸಿದ್ದರಾಮಯ್ಯನವರೇ, ಬಲವಂತದ ಮತಾಂತರ ಸಮಾಜ ಹಾಗೂ ಕುಟುಂಬವನ್ನು ಹೇಗೆ ಛಿದ್ರಗೊಳಿಸುತ್ತದೆ ಎಂಬುದು ನಿಮಗೆ ತಿಳಿಯದ ವಿಚಾರವೇನಲ್ಲ, ಆದರೂ ಜಾಣ ಕುರುಡುತನವೇಕೆ? ಚಿತ್ರದುರ್ಗ ಜಿಲ್ಲೆಯ ಶಾಸಕರ ತಾಯಿಯನ್ನೇ ಹುಸಿ ಮಾತಿನಿಂದ ಮತಾಂತರಗೊಳಿಸಿದ ವಿಚಾರ ಸದನದಲ್ಲಿ ಪ್ರಸ್ತಾಪವಾದಾಗ ತಾವು ಜಾಗೃತರಾಗಿ ಕೇಳಿಸಿಕೊಂಡಿದ್ದೀರಿ ತಾನೇ?" ಎಂದು ಕೇಳಿದೆ.
"ಮತಾಂತರ ನಿಷೇಧ ಕಾಯ್ದೆಯಿಂದ ಯಾರಿಗೋ ಬೇಸರವಾಗಬಹುದೆಂಬ ಕಾರಣಕ್ಕೆ ವಿಪಕ್ಷ ನಾಯಕ್ಕ ಸಿದ್ದರಾಮಯ್ಯ ಮತಾಂತರ ನಿಷೇಧ ಕಾಯ್ದೆಗೆ ವಿರೋಧಿಸುತ್ತಿದ್ದಾರೆ. ಟಿಪ್ಪು ಜಯಂತಿ ಆಚರಣೆಯ ಮೂಲಕ ಸಾಮಾಜಿಕ ಶಾಂತಿಯನ್ನೇ ಕದಡಿದ ಸಿದ್ದರಾಮಯ್ಯನವರು ಈಗ ಕೋಮು ಸೌಹಾರ್ದತೆಯ ಬಗ್ಗೆ ಪಾಠ ಮಾಡುವುದು ಸೋಜಿಗವಲ್ಲವೇ?" ಪ್ರಶ್ನಿಸಿದೆ.
"ಮತಾಂತರ ನಿಷೇಧ ಕಾಯ್ದೆಯಿಂದ ಯಾರಿಗೋ ಬೇಸರವಾಗಬಹುದೆಂಬ ಕಾರಣಕ್ಕೆ ಸಿದ್ದರಾಮಯ್ಯ ಮತಾಂತರ ನಿಷೇಧ ಕಾಯ್ದೆಗೆ ವಿರೋಧಿಸುತ್ತಿದ್ದಾರೆ. ಟಿಪ್ಪು ಜಯಂತಿ ಆಚರಣೆಯ ಮೂಲಕ ಸಾಮಾಜಿಕ ಶಾಂತಿಯನ್ನೇ ಕದಡಿದ ಸಿದ್ದರಾಮಯ್ಯನವರು ಈಗ ಕೋಮು ಸೌಹಾರ್ದತೆಯ ಬಗ್ಗೆ ಪಾಠ ಮಾಡುವುದು ಸೋಜಿಗವಲ್ಲವೇ?" ಎಂದು ಕೇಳಿದೆ.