ಬೆಂಗಳೂರು, ಡಿ.09 (DaijiworldNews/PY): "ಶಿಸ್ತು ಕ್ರಮ ಎದುರಿಸುತ್ತಿರುವ 61 ಸಹಾಯಕ ಸರ್ಕಾರಿ ಅಭಿಯೋಜಕರು/ಸಹಾಯಕ ಸರ್ಕಾರಿ ವಕೀಲರು ಕರ್ತವ್ಯ ನಿರ್ವಹಿಸಲು ಅವಕಾಶ ನೀಡಬಾರದು" ಎಂದು ಆದೇಶಿಸಿದೆ.
20212ರಲ್ಲಿ ನಡೆದ ಎಎಪಿ ಹಾಗೂ ಎಜಿಪಿಗಳ ನೇಮಕಾತಿಯಲ್ಲಿ ವಂಚನೆ ನಡೆದಿದ್ದು, ಈ ಬಗ್ಗೆ ವಿಶೇಷ ತನಿಖಾ ದಳ ತನಿಖೆ ನಡೆಸಬೇಕು ಎಂದು ಪ್ರತ್ಯೇಕ ಎರಡು ಸಾರ್ವಜನಿಕ ಹಿತಾಸಕ್ತಿ ಮನವಿಗಳ ವಿಚಾರಣೆಯನ್ನು ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ನೇತೃತ್ವದ ಪೀಠ ಈ ಆದೇಶ ಹೊರಡಿಸಿದೆ.
"ಪ್ರಕರಣವನ್ನು ಕಾನೂನಿನ ಪ್ರಕಾರ ಮುಂದುವರಿಸಬೇಕು. ಕ್ರಿಮಿನಲ್ ಪ್ರಕ್ರಿಯೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು" ಎಂದು ನ್ಯಾಯಾಲಯ ಹೇಳಿದೆ.
"2021ರ ಆಗಸ್ಟ್ನಲ್ಲಿ ರಾಜ್ಯ ಸರ್ಕಾರವು ಆಕ್ಷೇಪಣೆಗಳ ಹೇಳಿಕೆ ಸಲ್ಲಿಸಿತು. ಕಾನೂನು ಅಥವಾ ಸತ್ಯಗಳಲ್ಲಿ ಅರ್ಜಿಗಳನ್ನು ನಿರ್ವಹಿಸಲಾಗುವುದಿಲ್ಲ ಎಂದಿತ್ತು. ಖಾಸಗಿ ದೂರಿನ ಮೇರೆಗೆ ನೀಡಲಾದ ನಿರ್ದೇಶನಗಳ ಆಧಾರದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ" ಎಂದಿದೆ.
"2017ರ ಜೂನ್ 12ರಂದು ಆಯ್ಕೆಯಾದ 197 ಅಭ್ಯರ್ಥಿಗಳಲ್ಲಿ 61 ಅಭ್ಯರ್ಥಿಗಳ ವಿರುದ್ದ ಚಾರ್ಜ್ಶೀಟ್ ಸಲ್ಲಿಸಲಾಗಿದ್ದು, 2018ರ ಮಾರ್ಚ್ 15ರಂದು ಪೂರಕ ಆರೋಪಪಟ್ಟಿ ಸಲ್ಲಿಸಲಾಗಿದೆ. ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ" ಎಂದು ಸರ್ಕಾರ ಮಾಹಿತಿ ನೀಡಿದೆ.
"ಲೋಕಾಯುಕ್ತದ ಮೂಲಕ ಆರೋಪಿ ಎಪಿಪಿ/ಎಜಿಪಿಗಳ ವಿರುದ್ಧ ಶಿಸ್ತು ಕ್ರಮಗಳನ್ನು ಪ್ರಾರಂಭಿಸಿದೆ. ಆರೋಪಿಗಳನ್ನು ಅಮಾನತು ಮಾಡಲಾಗಿದೆ. ಅವರ ಕರ್ತವ್ಯಗಳನ್ನು ನಿರ್ವಹಿಸಲು ಸಾಧ್ಯವಿಲ್ಲ" ಎಂದು ನ್ಯಾಯಾಲಯ ಹೇಳಿದೆ.