ಮೈಸೂರು, ಡಿ 09 (DaijiworldNews/MS): ಕೊರೊನಾ ಸೋಂಕಿನಿಂದ ಮೃತಪಟ್ಟವರ ಡಿಸಿಸಿ ಬ್ಯಾಂಕ್ ಸಾಲ ಮನ್ನಾ ಮಾಡಲಾಗಿದೆ .ಇದನ್ನು ಮೀರಿ ಯಾವುದಾದರೂ ಬ್ಯಾಂಕ್ ನೋಟಿಸ್ ನೀಡಿದ್ದರೆ ಬ್ಯಾಂಕ್ ನವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಗಳಲ್ಲಿ ಸಾಲ ಪಡೆದವರು ಕೋವಿಡ್ ನಿಂದ ಮೃತಪಟ್ಟಿದ್ದರೆ ಅವರ ಸಾಲ ಮನ್ನಾ ಮಾಡಲಾಗಿದೆ. ಇದನ್ನು ಮೀರಿ ಯಾವುದಾದರೂ ಬ್ಯಾಂಕ್ ನೋಟಿಸ್ ನೀಡಿದ್ದರೆ ಬ್ಯಾಂಕ್ ನವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳಿಂದ ಸಾಲ ಪಡೆದವರು ಕೊರೊನಾದಿಂದ ಮೃತ ಪಟ್ಟರೆ ಅವರ ಸಾಲ ಮನ್ನಾ ಮಾಡಲಾಗುವುದು ಎಂಬ ಸರ್ಕಾರ ಹೇಳಿಕೆ ಜನ ನಂಬಿದ್ದು ಆದರೆ ಹಲವೆಡೆ ಇದು ಉಲ್ಟಾ ಆಗಿದ್ದು ಆರ್ಥಿಕ ಬಲವಿಲ್ಲದ ಡಿಸಿಸಿ ಬ್ಯಾಂಕ್ ಗಳು ಈಗ ಮೃತಪಟ್ಟ ಸಾಲಗಾರರ ಕುಟುಂಬಕ್ಕೆ ನೋಟಿಸ್ ನೀಡುತ್ತಿದೆ. ಈ ಹಿನ್ನಲೆಯಲ್ಲಿ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ನೋಟಿಸ್ ನೀಡಿದ್ದರೆ ಬ್ಯಾಂಕ್ ನವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಮತ್ತೊಮ್ಮೆ ಎಚ್ಚರಿಸಿದ್ದಾರೆ.