ನವದೆಹಲಿ, ಡಿ.09 (DaijiworldNews/PY): ಬುಧವಾರ ತಮಿಳುನಾಡಿನ ಊಟಿ ಸಮೀಪ ಹೆಲಿಕಾಪ್ಟರ್ ಪತನಗೊಂಡು ಸಿಡಿಎಸ್ ಬಿಪಿನ್ ರಾವತ್, ಪತ್ನಿ ಸೇರಿದಂತೆ 11 ಮಂದಿ ಮೃತರ ಕುರಿತು ಇಂದು ಸಂಸತ್ ಕಲಾಪ ಪ್ರಾರಂಭವಾಗುತ್ತಿದ್ದಂತೆ ಸದನಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾಹಿತಿ ನೀಡಿದರು.
"ಹೆಲಿಕಾಪ್ಟರ್ ಪತನದಲ್ಲಿ ಬಿಪಿನ್ ರಾವತ್ ಸೇರಿ 13 ಮಂದಿ ಸಾವನ್ನಪ್ಪಿದ್ದು, ಮೃತರೆಲ್ಲರಿಗೂ ಶ್ರದ್ಧಾಂಜಲಿ ಸಲ್ಲಿಸಲಾಗುತ್ತದೆ. ಸೇನಾ ಗೌರವ ವಂದನೆ ಸಲ್ಲಿಸಲಾಗುತ್ತದೆ. ಈ ಬಗ್ಗೆ ವಾಯುಪಡೆಯಿಂದ ತನಿಖೆ ನಡೆಸಲು ಸಮಿತಿ ರಚಿಸಲಾಗಿದೆ" ಎಂದಿದ್ದಾರೆ.
ಈ ಕುರಿತು ಸಂಸತ್ ಸದನದಲ್ಲಿ ಮಾತನಾಡಿದ ಅವರು, ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರು ಮಾತ್ರವೇ ಬದುಕುಳಿದ್ದಾರೆ. ಉಳಿದಂತೆ 11 ಮಂದಿ ಸಾವನ್ನಪ್ಪಿರುವುದಾಗಿ ಹೇಳಿದ್ದಾರೆ.
"ದುರಂತದ ಕುರಿತು ವಾಯುಸೇನೆಯಿಂದ ಸಮಿತಿ ರಚಿಸಲ್ಪಟ್ಟಿದ್ದು, ಸಮಗ್ರ ತನಿಖೆ ನಡೆಸಲಾಗುತ್ತಿದೆ. ಮೃತರೆಲ್ಲರಿಗೂ ಶ್ರದ್ದಾಂಜಲಿ ಸಲ್ಲಿಸಲಾಗುತ್ತದೆ. ಸೇನಾ ವಂದನೆ ಸಲ್ಲಿಸಲಾಗುತ್ತದೆ. ಇಂದು ಸಂಜೆ ಪಾರ್ಥೀವ ಶರೀರವನ್ನು ದೆಹಲಿಗೆ ತರಲಾಗುತ್ತದೆ" ಎಂದು ತಿಳಿಸಿದ್ದಾರೆ.