ನವದೆಹಲಿ, ಡಿ.09 (DaijiworldNews/PY): ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕುನ್ನೂರಿನಲ್ಲಿ ಸಂಭವಿಸಿದ ಮಿಲಿಟರಿ ಹೆಲಿಕಾಪ್ಟರ್ ದುರಂತದ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿದೆ.
ಸೇನಾ ಹೆಲಿಕಾಪ್ಟರ್ ದುರಂತ ಸಂಭವಿಸಿದ ಸ್ಥಳದಲ್ಲಿ 40 ಯೋಧರ ತಂಡ ವಾಯುಸೇನೆ ಹೆಲಿಕಾಪ್ಟರ್ನಲ್ಲಿದ್ದ ಬ್ಲ್ಯಾಕ್ ಬಾಕ್ಸ್ ಪತ್ತೆ ಹಚ್ಚಿದ್ದಾರೆ. ಬ್ಲ್ಯಾಕ್ ಬಾಕ್ಸ್ಗಾಗಿ ನಿನ್ನೆಯಿಂದ ಯೋಧರು ಶೋಧ ನಡೆಸುತ್ತಿದ್ದರು. ಇದರಿಂದ ಅಪಘಾತದ ಕಾರಣ ಬಹಿರಂಗವಾಗಲಿದೆ ಎಂದು ಹೇಳಲಾಗುತ್ತಿದೆ.
ತಾಂತ್ರಿಕ ತೊಂದರೆಯೋ, ಹವಾಮಾನ ವೈಪರಿತ್ಯವೋ ಅಥವಾ ಪೈಲಟ್ ತಪ್ಪು ತೀರ್ಮಾನವೋ ಎನ್ನುವ ಬಗ್ಗೆ ಮಾಹಿತಿ ಲಭ್ಯವಾಗಲಿದೆ. ಬ್ಲ್ಯಾಕ್ ಬಾಕ್ಸ್ನಲ್ಲಿ ಕೊನೆಯ ಕ್ಷಣಗಳ ವಿವರ ಇರಲಿದ್ದು, ಇದೀಗ ದುರಂತ ನಡೆದ ಸ್ಥಳದಲ್ಲಿ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿದೆ.