ತಮಿಳುನಾಡು, ಡಿ.08 (DaijiworldNews/SM):ಇಲ್ಲಿನ್ ಕನೂಲ್ ಬಳಿ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ 13 ಮಂದಿ ಮೃತಪಟ್ಟಿದ್ದು, ಭಾರತೀಯ ಸೇನೆಯ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
2020ರಲ್ಲಿ ಪ್ರಾಣ ಪಣಕ್ಕಿಟ್ಟು ಎಲ್ ಸಿ ಎ ತೇಜಸ್ ಫೈಟರ್ ಏರ್ ಕ್ರಾಫ್ಟ್ ಪತನವಾಗುವುದನ್ನು ವರುಣ್ ಸಿಂಗ್ ತಪ್ಪಿಸಿದ್ದರು. ಪ್ರಾಣ ಪಣಕ್ಕಿಟ್ಟು ವಾಯುತುರ್ತುಪರಿಸ್ಥಿತಿ ನಿಭಾಯಿಸಿದ್ದಕ್ಕೆ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. 2021ರ ಸ್ವಾತಂತ್ರ್ಯ ದಿನದಂದು ಅವರಿಗೆ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಆದರೆ, ಇಂದಿನ ಘಟನೆಯಲ್ಲಿ ಅವರ ಸ್ಥಿತಿ ಮಾತ್ರ ಸಾವು ಬದುಕಿನ ನಡುವಿನ ಹೋರಾಟವಾಗಿದೆ.
ಶೇ. 80ರಷ್ಟು ಸುಟ್ಟ ಗಾಯಗಳೊಂದಿಗೆ ಅವರು, ವೆಲ್ಲಿಂಗ್ಟನ್ ಸೇನಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ವರುಣ್ ಸಿಂಗ್ ಶೀಘ್ರ ಗುಣಮುಖರಾಗಲೆಂದು ಭಾರತೀಯರ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ. ಶೀಘ್ರ ಗುಣಮುಖರಾಗಿ ಬರಲೆಂದು ನಮ್ಮ ಆಶಯವಾಗಿದೆ.