ನವದೆಹಲಿ, ಡಿ.08 (DaijiworldNews/SM): ಜನರಲ್ ಬಿಪಿನ್ ರಾವತ್ ಓರ್ವ ದೇಶಕಂಡ ಶ್ರೇಷ್ಠ ಯೋಧ ಹಾಗೂ ನೈಜ ದೇಶ ಭಕ್ತ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ರಾವತ್ ದೇಶದ ಭದ್ರತಾ ವಿಚಾರ ಹಾಗೂ ನೂತನ ತಂತ್ರಜ್ಞಾನ ಬಳಕೆಯಲ್ಲಿ ಬದಲಾವಣೆಯ ಜೊತೆಗೆ ಹೊಸತನವನ್ನು ತಂದವರಾಗಿದ್ದಾರೆ. ಆದರೆ, ಇಂದು ದೇಶ ಅವರನ್ನು ಕಳೆದುಕೊಂಡಿರುವುದು ಅತೀವ ದುಃಖವನ್ನುಂಟು ಮಾಡಿದೆ ಎಂದು ಬರೆದುಕೊಂಡಿದ್ದಾರೆ.
ಇನ್ನು ಜನರಲ್ ರಾವತ್ ಅವರು ತಮಿಳುನಾಡಿನಲ್ಲಿ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ನಿಧನರಾಗಿದ್ದಾರೆ. ಈ ವಿಷಯವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಘಟನೆಯಲ್ಲಿ ಅವರ ಪತ್ನಿ ಹಾಗೂ ಕುಟುಂಬಸ್ಥರನ್ನು ಕಳೆದುಕೊಂಡಿದ್ದಾರೆ. ಬಿಪಿನ್ ಅವರು ದೇಶಕ್ಕಾಗಿ ಅತ್ಯಂತ ಶ್ರದ್ಧೆಯಿಂದ ಸೇವೆ ನೀಡಿದ್ದಾರೆ. ಅಲ್ಲದೆ, ದುರಂತದಲ್ಲಿ ಮಡಿದವರ ಕುಟುಂಬಕ್ಕೆ ನಾನು ಸಂತೈಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.