ಚಿಕ್ಕಮಗಳೂರು, ಡಿ.08 (DaijiworldNews/PY): "ಯಾವುದು ಕೆಟ್ಟದ್ದು, ಯಾವುದು ಒಳ್ಳೆಯದು ಎಂದು ಮತದಾರರಿಗೆ ತಿಳಿದಿದೆ. ಒಪ್ಪಂದವೆಲ್ಲಾ ಕಾಂಗ್ರೆಸ್ಸಿಗೆ ಬಿಟ್ಟಿದ್ದು, ನಮ್ಮದು ಜನರೊಂದಿಗೆ ಸಂಬಂಧ" ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಜೆಡಿಎಸ್ ಎಲ್ಲಿ ಸ್ಪರ್ಧಿಸುವುದಿಲ್ಲವೋ ಅಲ್ಲಿ ಬೆಂಬಲ ಕೊಡಿ ಎಂದು ಕೇಳಿದ್ದೆವು. ಜೆಡಿಎಸ್ ವಳಿ ಸ್ವಲ್ಪ ಮತಗಳಿದ್ದು, ಹಾಕುತ್ತೇವೆ ಎಂದು ಬಹಿರಂಗವಾಗವಾಗಿ ತಿಳಿಸಿಲ್ಲ" ಎಂದಿದ್ದಾರೆ.
"ಜೆಡಿಎಸ್ ಬೆಂಬಲ ಇಲ್ಲದೇ ಇದ್ದಲ್ಲಿ ನೀವು ಶಾಸಕರಾಗಲು ಕಷ್ಟಪಡಬೇಕಿತ್ತು. ಜೆಡಿಎಸ್ ಬೆಂಬಲ ಇಲ್ಲದಿದ್ದರೆ ನಿಮ್ಮ ತಮ್ಮನನ್ನೂ ಸಂಸದರಾಗಿ ಗೆಲ್ಲಿಸಲಿ ಸಾಧ್ಯವಾಗುತ್ತಿರಲಿಲ್ಲ. ಬಿಜೆಪಿ ಅಲೆಯಲ್ಲಿ ಜೆಡಿಎಸ್ ಬೆಂಬಲವಿದ್ದದರಿಂದ ಸಂಸದರಾಗಿ ಆಯ್ಕೆಗೊಂಡರು" ಎಂದು ಲೇವಡಿ ಮಾಡಿದ್ದಾರೆ.
"ಹೆಚ್ ಡಿ ಕುಮಾರಸ್ವಾಮಿ ಅವರನ್ನ ಸಿಎಂ ಮಾಡಿ ಇಳಿಸಲು ಅವರದ್ದೇ ಶಾಸಕರನ್ನು ಕಳಿಸಿದ್ದು ನಾವೇ?. ಸಿಎಂ ಸ್ಥಾನದಲ್ಲಿ ಕೂರಿಸಿ, ಕಾಲೆಳೆದ ಎರಡೂ ಕೆಲಸ ಮಾಡಿದ್ದೂ ಸಹ ಅವರೇ" ಎಂದಿದ್ದಾರೆ.