ಬೆಂಗಳೂರು, ಡಿ.08 (DaijiworldNews/PY): "ಕೊರೊನಾ ಸೋಂಕಿನ ಅಂತ್ಯದ ದಿನಗಳು ಶುರುವಾಗಿದೆ. ಆದರೂ ನಾವು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವುದು ಅಗತ್ಯ" ಎಂದು ಆರೊಗ್ಯ ಸಚಿವ ಡಾ. ಕೆ ಸುಧಾಕರ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು," ಓಮ್ರಿಕಾನ್ ಬಗ್ಗೆ ಯಾರೂ ನಿರ್ಲಕ್ಷ್ಯ ಮಾಡಬಾರದು. ಇದು ಹೊಸ ಪ್ರಬೇಧವಾಗಿದ್ದು, ತಕ್ಷಣಕ್ಕೆ ತಿಳಿಯುವುದಿಲ್ಲ, ಇದಕ್ಕೆ ಅಧ್ಯಯನ ಮುಖ್ಯ. ಮೂರನೇ ಅಲೆಯಲ್ಲಿ ದೊಡ್ಡ ದುಷ್ಟರಿಣಾಮ ಯಾವುದು ಆಗುವುದಿಲ್ಲ. ಆದರೆ, ಮುಂಜಾಗ್ರತಾ ಕ್ರಮ ಕೈಗೊಳ್ಳುವುದು ಸೂಕ್ತ" ಎಂದು ಹೇಳಿದ್ದಾರೆ.
"ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಕೆಲ ದಿನಗಳಿಂದ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಾಗಿ ಪತ್ತೆಯಾಗುತ್ತಿವೆ. ಹಾಗಾಗಿ ಸರ್ಕಾರವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ" ಎಂದಿದ್ದಾರೆ.
"ಈಗಾಗಲೇ 7 ಕೋಟಿ 80 ಲಕ್ಷ ಡೋಸ್ ಲಸಿಕೆಯನ್ನು ನೀಡಲಾಗಿದೆ. ಲಸಿಕೆ ನೀಡಿಕೆಯಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿದೆ" ಎಂದು ಹೇಳಿದ್ದಾರೆ.