ನವದೆಹಲಿ, ಡಿ.07 (DaijiworldNews/SM): ರಾಜ್ಯದಲ್ಲಿ ಪ್ರಸ್ತುತ ಕೋವಿಡ್ ಮೂರನೇ ಅಲೆಯ ಬಗ್ಗೆ ಅನಗತ್ಯ ಗೊಂದಲ ಸೃಷ್ಠಿಸಲಾಗುತ್ತಿದೆ. ಆದರೆ, ತಜ್ಞರ ಸಮಿತಿ ಮಾತ್ರ ಆತಂಕದ ಅಗತ್ಯವಿಲ್ಲ ಎಂದಿದೆ.
ದೇಶದಲ್ಲಿ ಕೋವಿಡ್ ಮೂರನೇ ಅಲೆ ಇನ್ನೂ ಬಂದಿಲ್ಲ ಭಯಪಡುವ ಅಗತ್ಯವಿಲ್ಲ ಎಂದಿದೆ. ಕೊರೊನಾ ಸೋಂಕು ಸಂಖ್ಯೆ 9 ರಾಜ್ಯಗಳ 50 ಜಿಲ್ಲೆಗಳಲ್ಲಿ ಏರುಗತಿಯಲ್ಲಿದ್ದು ಓಮಿಕ್ರಾನ್ ರೂಪಾಂತರಿಯೂ ಪತ್ತೆಯಾಗುತ್ತಿರುವುದರಿಂದ 3ನೇ ಅಲೆಯ ಆತಂಕ ಮೂಡಿಸಿದೆ. 10 ದಿನಗಳಲ್ಲಿ ರಾಜಸ್ಥಾನ, ತಮಿಳುನಾಡು, ಕೇರಳ, ದೆಹಲಿ, ಕರ್ನಾಟಕ, ಜಮ್ಮು-ಕಾಶ್ಮೀರ, ಒಡಿಶಾ, ಮಿಜೊರಾಮ್ ಗಳಲ್ಲಿ ಕೋವಿಡ್-19 ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಆದರೆ, ಈ ಬಗ್ಗೆ ಅನಗತ್ಯವಾಗಿ ಗೊಂದಲಕ್ಕೆ ಒಳಗಾಗುವುದು ಬೇಡ ಎಂದು ಕೇಂದ್ರದ ತಜ್ಞರ ಸಮಿತಿ ಸಲಹೆ ನೀಡಿದೆ.
ಇನ್ನು ಕೇಂದ್ರ ಆರೋಗ್ಯ ಇಲಾಖೆ ರಾಜ್ಯಗಳಿಗೆ ಪತ್ರ ಬರೆದಿದ್ದು, ಸೋಂಕು ಪ್ರಸರಣವಾಗದಂತೆ ಎಚ್ಚರಿಕಾ ಕ್ರಮಕೈಗೊಳ್ಳುವಂತೆ ಸೂಚಿಸಿದೆ. ಇನ್ನೊಂದೆಡೆ ಪರೀಕ್ಷೆಗಳನ್ನು ಹೆಚ್ಚಿಸಿರುವ ಕಾರಣದಿಂದಾಗಿ ಪಾಸಿಟಿವ್ ಪ್ರಕರಣಗಳು ಏರಿಕೆಯಾಗುತ್ತಿದೆ ಎಂದು ಸಚಿವಾಲಯ ತಿಳಿಸಿದೆ.