ಒಡಿಶಾ, ಡಿ.07 (DaijiworldNews/HR): ಕೊರೊನಾ ಸೋಂಕು ದೃಢಪಟ್ಟು ಚಿಕಿತ್ಸೆ ಪಡೆಯುತ್ತಿದ್ದ ಪದ್ಮಶ್ರೀ ಪುರಸ್ಕೃತ ಅಕ್ಷರ ಸಂತ ನಂದಾ ಮಾಸ್ಟರ್( ಕಿಶೋರ್ ಪ್ರಸ್ಟಿ) ಅವರು ಇಂದು ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.
ಕಿಶೋರ್ ಪ್ರಸ್ಟಿ ಅವರು ಲಕ್ಷಾಂತರ ಬಡವರಿಗೆ ಅಕ್ಷರ ದಾನದ ಮೂಲಕ ನಂದಾ ಮಾಸ್ಟರ್ ಎಂಬುದಾಗಿಯೇ ಪ್ರಸಿದ್ಧಿ ಗಳಿಸಿದ್ದು, ಈ ಬಾರಿ ಅವರ ಅಕ್ಷರ ಸೇವೆಗೆ ಪದ್ಮಶ್ರೀ ಪ್ರಶಸ್ತಿ ಅವರಿಗೆ ಲಭಿಸಿತ್ತು.
ಇನ್ನು ಅಕ್ಷರ ಸೇವೆಯಲ್ಲಿಯೇ ಜೀವನವನ್ನು ಕಳೆದ ನಂದಾ ಮಾಸ್ಟರ್ ಅವರಿಗೆ ನವೆಂಬರ್ 30ರಂದು ಕೊರೊನಾ ಸೋಂಕು ದೃಢಪಟ್ಟು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ನಿಧನರಾಗಿದ್ದಾರೆ.