ಬೆಳಗಾವಿ, ಡಿ.07 (DaijiworldNews/PY): "ಪರಿಷತ್ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡುವುದಿಲ್ಲ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ತಿಳಿಸಿದ್ದಾರೆ. ಅದು ಅವರ ಪಕ್ಷ ವಿಚಾರವಾಗಿದ್ದು, ಈ ಬಗ್ಗೆ ಯಾವುದೇ ರೀತಿಯಾದ ಕಮೆಂಟ್ ಮಾಡುವುದಿಲ್ಲ" ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ತಮ್ಮ ವಿಚಾರದ ಬಗ್ಗೆ ನಮ್ಮ ಹಿರಿಯ ನಾಯಕ ಯಡಿಯೂರಪ್ಪ ಅವರು ಹೆಚ್ ಡಿ ಕುಮಾರಸ್ವಾಮಿ ಅವರ ಬಳಿಕ ವ್ಯಕ್ತಪಡಿಸಿದ್ದರು. ಜೆಡಿಎಸ್ ಅಭ್ಯರ್ಥಿಗಳು ಎಲ್ಲಿ ಸ್ಪರ್ಧಿಸುವುದಿಲ್ಲ ಅಲ್ಲ ಬೆಂಬಲ ನೀಡಿ ಎಂದು ಕೇಳಿದ್ದರು. ನಾವೇನೂ ಅವರ ಬೆಂಬಲ ಕೇಳಿರಲಿಲ್ಲ. ಅವರು ಯಾವ ನಿರ್ಧಾರ ಕೈಗೊಳ್ಳುತ್ತಾರೋ ಕೈಗೊಳ್ಳಲಿ. ಅದು ಅವ ಪಕ್ಷಕ್ಕೆ ಬಿಟ್ಟ ವಿಚಾರ" ಎಂದು ತಿಳಿಸಿದ್ದಾರೆ.
"ಬೆಳಗಾವಿಯಲ್ಲಿ 13ರಿಂದ ವಿಧಾನಮಂಡಲ ಅಧಿವೇಶನ ನಡೆಯಲಿದ್ದು, ಈಗಾಗಲೇ ಇದಕ್ಕಾಗಿ ತಯಾರಿ ಮಾಡಿಕೊಳ್ಳಲಾಗಿದೆ. ಕೊರೊನಾ ನಿಯಮಗಳನ್ನು ಅನುಸರಿಸಿ ಅಧಿವೇಶನ ನಡೆಸುತ್ತೇವೆ" ಎಂದಿದ್ದಾರೆ.
"ಮುಂಗಾರು, ಹಿಂಗಾರು ಬೆಳೆ ಹಾನಿ ಕುರಿತು ಸರ್ವೇ ಮಾಡಲು ವಿಳಂಬ ಆಗುತ್ತಿತ್ತು. ತುರ್ತು ಪರಿಹಾರದ ನಿಟ್ಟಿನಲ್ಲಿ ಈಗ ಕ್ರಮ ವಹಿಸಲಾಗಿದೆ. ಈವರೆಗೆ ಸುಮಾರು 422 ಕೋಟಿ ರೂ. ಪರಿಹಾರ ವಿತರಣೆ ಮಾಡಲಾಗಿದೆ" ಎಂದು ತಿಳಿಸಿದ್ದಾರೆ.