ನವದೆಹಲಿ, ಡಿ.07 (DaijiworldNews/HR): ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಸಂಸದರು ಸಂಸತ್ತಿನ ಅಧಿವೇಶನಗಳಿಗೆ ನಿಯಮಿತವಾಗಿ ಹಾಜರಾಗುವಂತೆ ಒತ್ತಾಯಿಸಿದ್ದು, ನೀವು ನಿಮ್ಮನ್ನು ಬದಲಿಸಿಕೊಳ್ಳಿ, ಇಲ್ಲದಿದ್ದರೆ ಸರಿಯಾದ ಸಮಯದಲ್ಲಿ ಬದಲಾವಣೆಗಳನ್ನು ಮಾಡಲಾಗುತ್ತದೆ" ಎಂದು ಸಂಸದರಿಗೆ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಸಂಸತ್ತು ಹಾಗೂ ಸಭೆಗಳಲ್ಲಿ ನಿಯಮಿತವಾಗಿ ಪಾಲ್ಗೊಳ್ಳಿ. ಈ ಬಗ್ಗೆ ನಿರಂತರವಾಗಿ ಒತ್ತಡ ಹೇರುವುದು ಹಾಗೂ ನಿಮ್ಮನ್ನು ಮಕ್ಕಳಂತೆ ನಡೆಸಿಕೊಳ್ಳುವುದು ನನಗೆ ಒಳ್ಳೆಯದಲ್ಲ" ಎಂದಿದ್ದಾರೆ.
ಇನ್ನು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ 12 ವಿರೋಧ ಪಕ್ಷದ ಸಂಸದರನ್ನು ಅಮಾನತುಗೊಳಿಸಿದ ಮೇಲೆ ಸರಕಾರದ ವಿರುದ್ದ ವಿಪಕ್ಷಗಳಿಂದ ಆಕ್ರೋಶ ವ್ಯಕ್ತಪಡಿಸುತ್ತಿದೆ.