ನವದೆಹಲಿ, ಡಿ.07 (DaijiworldNews/HR): ಭಾರತಕ್ಕೆ ರಷ್ಯಾ 'ಎಸ್-400' ಕ್ಷಿಪಣಿ ವ್ಯವಸ್ಥೆಯನ್ನು ಪೂರೈಕೆ ಮಾಡುತ್ತಿರುವುದಕ್ಕೆ ಅಮೇರಿಕಾ ಕಳವಳ ವ್ಯಕ್ತಪಡಿಸಿದ್ದು, ಈ ನಡುವೆಯೂ 'ಎಸ್-400' ವಾಯುರಕ್ಷಣಾ ಕ್ಷಿಪಣಿ ವ್ಯವಸ್ಥೆಯನ್ನು ರಷ್ಯಾವೂ ಭಾರತಕ್ಕೆ ಪೂರೈಸುವ ಪ್ರಕ್ರಿಯೆಯನ್ನು ಆರಂಭಿಸಿದೆ ಎಂದು ತಿಳಿದು ಬಂದಿದೆ.
ಈ ಕುರಿತು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಮಾಹಿತಿ ನೀಡಿದ್ದು, "ಈ ತಿಂಗಳು ಪೂರೈಕೆ ಆರಂಭಗೊಂಡಿದ್ದು, ಇದು ಮುಂದುವರಿಯಲಿದೆ" ಎಂದು ಹೇಳಿದ್ದಾರೆ.
ಇನ್ನು ಕೇಂದ್ರ ಸರ್ಕಾರವು ರಷ್ಯಾ ಜತೆಗಿನ ಸೇನಾ ತಾಂತ್ರಿಕ ಸಹಕಾರ ವಿಸ್ತರಣೆ ಒಪ್ಪಂದ ಮತ್ತು ರಕ್ಷಣಾ ಸಹಕಾರ ಒಪ್ಪಂದಕ್ಕೆ ಸೋಮವಾರ ಸಹಿ ಹಾಕಿದ ಬೆನ್ನಲ್ಲೇ ಈ ಮಾಹಿತಿ ತಿಳಿಸಿದ್ದಾರೆ.