ಬೆಂಗಳೂರು, ನ 07 (DaijiworldNews/MS): ರಾಜ್ಯಾದ್ಯಂತ ಡಿ. 8 ರಿಂದ 3 ದಿನಗಳ ಕಾಲ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದ್ದು ಇದು ಮದ್ಯಪ್ರಿಯರಿಗೆ ಶಾಕ್ ನೀಡಿದೆ.
ಡಿಸೆಂಬರ್ 10 ರಂದು ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಡಿಸೆಂಬರ್ 8 ರಿಂದ 3 ದಿನಗಳ ಕಾಲ ವೈನ್ ಸ್ಟೋರ್ ಮತ್ತು ಬಾರ್ ಗಳನ್ನು ಮುಚ್ಚುವಂತೆ ಸೂಚಿಸಲಾಗಿದೆ.
ಮುಖ್ಯ ಚುನಾವಣಾಧಿಕಾರಿಗಳ ಈ ಸೂಚನೆಯನ್ನು ವೈನ್ ಶಾಪ್ ಮಾಲೀಕರು ಹಾಗೂ ಮದ್ಯ ಮಾರಾಟಗಾರರು ಖಂಡಿಸಿದ್ದಾರೆ. ಡಿಸೆಂಬರ್ 8 ರಿಂದ ಡಿಸೆಂಬರ್ 10 ರ ಮಧ್ಯರಾತ್ರಿಯವರೆಗೆ ಮದ್ಯ ಮಾರಾಟ ನಿಷೇಧದಿಂದ ಭಾರೀ ನಷ್ಟವಾಗಲಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
25 ವಿಧಾನ ಪರಿಷತ್ ಸ್ಥಾನಗಳಿಗೆ ಡಿಸೆಂಬರ್ 10ರಂದು ಮತದಾನ ನಡೆಯಲಿದೆ. ಡಿ.10ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ. ಡಿಸೆಂಬರ್ 14ಕ್ಕೆ ಮತ ಎಣಿಕೆನಡೆದು, ಫಲಿತಾಂಶ ಹೊರ ಬೀಳಲಿದೆ.