ನವದೆಹಲಿ, ಡಿ.07 (DaijiworldNews/PY): ಮಥುರಾದ ಶ್ರೀಕೃಷ್ಣ ಜನ್ಮಭೂಮಿ ವಿವಾದವನ್ನು 2024ರಲ್ಲಿ ಕೈಗೆತ್ತಿಕೊಳ್ಳುವುದಾಗಿ ವಿಶ್ವ ಹಿಂದೂ ಪರಿಷತ್ ತಿಳಿಸಿದೆ.
ಅಯೋಧ್ಯೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಎಚ್ಪಿ ರಾಷ್ಟ್ರೀಯ ಅಧ್ಯಕ್ಷ ಅಲೋಕ್ ಕುಮಾರ್, "ಈಗ ನಮ್ಮ ಸಂಪೂರ್ಣ ಗಮನ ರಾಮ ಮಂದಿರ ನಿರ್ಮಾಣದ ಕಡೆಗೆ ಇದೆ. ಮಥುರಾದ ಶ್ರೀಕೃಷ್ಣ ಜನ್ಮಭೂಮಿ ವಿಷಯವನ್ನು ರಾಮ ಮಂದಿರ ಮುಕ್ತಾಯ ಆಗುವ ತನಕ ಕೈಗೆತ್ತಿಕೊಳ್ಳುವುದಿಲ್ಲ. ರಾಮಮಂದಿರದ ಗರ್ಭಗುಡಿಯಲ್ಲಿ 2023ರ ವೇಳೆಗೆ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಆಗಲಿದೆ" ಎಂದು ಹೇಳಿದ್ದಾರೆ.
"ಕೃಷ್ಣ ಮಂದಿರಕ್ಕಾಗಿ ಶಾಹಿ ಈದ್ಗಾ ಮಸೀದಿ ಜಾಗವನ್ನು ಪಡೆಯಬೇಕೆಂಬ ಬೇಡಿಕೆಗೆ ಅಖಿಲ ಭಾರತ ಅಖಾಡ ಪರಿಷದ್ ಬೆಂಬಲ ನೀಡಿದೆ" ಎಂದಿದ್ದಾರೆ.
ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ, ಮಥುರಾಗೆ ತಯಾರಾಗಿ ಎಂದು ಬಿಜೆಪಿ ಬೆಂಬಲಿಗರಿಗೆ ಕರೆ ನೀಡಿದ್ದ ಬೆನ್ನಲ್ಲೇ ವಿಹೆಚ್ಪಿ ಈ ಹೇಳಿಕೆ ನೀಡಿದೆ.