ಹಾವೇರಿ, ಡಿ. 06 (DaijiworldNews/HR): ನಾನು ಬಿಜೆಪಿ ಸೇರುವುದಿಲ್ಲ ಎಂದು ಹೇಳಿದಕ್ಕೆ ನನ್ನನ್ನು ಜೈಲಿಗೆ ಹಾಕಿದ್ದರು ಎಂಬ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಕೃಷಿ ಸಚಿವ ಬಿ.ಸಿ. ಪಾಟೀಲ್ ತಿರುಗೇಟು ನೀಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ತಾವು ಮಾಡಿದ ತಪ್ಪಿಗೆ ಮತ್ತು ಅಕ್ರಮಕ್ಕೆ ಜೈಲಿಗೆ ಹೋಗಿ ಬಿಜೆಪಿ ಮೇಲೆ ಆಪಾದನೆ ಮಾಡುತ್ತಿದ್ದಾರೆ" ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನು "ಬಿಜೆಪಿ ಸೇರದವರನ್ನೆಲ್ಲ ಜೈಲಿಗೆ ಕಳಿಸೋಕೆ ಆಗಿದೆಯಾ? ಎಂದು ಪ್ರಶ್ನಿಸಿರುವ ಅವರು, ಎಲುಬಿಲ್ಲದ ನಾಲಿಗೆ ಮಾತನಾಡಿದರೆ ಜನ ನಂಬುವಷ್ಟು ದಡ್ಡರಲ್ಲ. ಮಾತನಾಡಬೇಕಾದರೆ ಅರ್ಥ ಇಟ್ಟುಕೊಂಡು ಮಾತನಾಡಬೇಕು" ಎಂದು ಹೇಳಿದ್ದಾರೆ.