ಬೆಂಗಳೂರು,ಡಿ. 06 (DaijiworldNews/HR): ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸಲು ಗಾಂಧೀಜಿ ಕರೆ ನೀಡಿದ್ದರು. ಇದೀಗ ದೇಶದ ಜನತೆ ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸಲು ಸಿದ್ಧರಾಗಿದ್ದಾರೆ" ಎಂದು ಬಿಜೆಪಿ ಹೇಳಿದೆ.
ಈ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ಬಿಜೆಪಿ, "ತೃಣ ಮೂಲ ಕಾಂಗ್ರೆಸ್ ಪಕ್ಷಕ್ಕೂ ಕಾಂಗ್ರೆಸ್ ಮೇಲೆ ವಿಶ್ವಾಸ ಇಲ್ಲ. ಕಾಂಗ್ರೆಸ್ ಮಿತ್ರ ಪಕ್ಷದವರಿಗೆ ಕೂಡಾ ಕಾಂಗ್ರೆಸ್ ಮೇಲೆ ಭರವಸೆ ಇಲ್ಲ. ಹಾಗಾಗಿ ದೇಶದ ಜನತೆ ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸಲು ಸಿದ್ಧರಾಗಿದ್ದಾರೆ" ಎಂದಿದೆ.
ಇನ್ನು ಯುಪಿಎ ಅಂಗಪಕ್ಷಗಳೇ ರಾಹುಲ್ ಗಾಂಧಿ ಅವರಧಿ ನಾಯಕತ್ವ ಒಪ್ಪುತ್ತಿಲ್ಲ. ಇನ್ನು ದೇಶದ ಜನ ಹೇಗೆ ಒಪ್ಪುತ್ತಾರೆ? ಎಂದು ಪ್ರಶ್ನಿಸಿರುವ ಬಿಜೆಪಿ, ಕಾಂಗ್ರೆಸ್ ಪಕ್ಷದವರು ಭ್ರಮೆಯಲ್ಲಿದ್ದಾರೆ. ಅಧಿಕಾರ ವಂಚಿತರಾಗಿ ಹತಾಶರಾಗಿದ್ದಾರೆ" ಎಂದು ಹೇಳಿದೆ.