ಬಾಗಲಕೋಟೆ, ಡಿ. 06 (DaijiworldNews/HR): ರಾಜ್ಯ ಬಿಜೆಪಿ ಸರ್ಕಾರದಲ್ಲಿ ದುರಾಡಳಿತ, ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬಿಜೆಪಿ ಸರ್ಕಾರದಲ್ಲಿ ದುರಾಡಳಿ, ಭ್ರಷ್ಟಾಚಾರ ಹೆಚ್ಚಾಗಿದ್ದು, ಅಭಿವೃದ್ದಿ ಕೆಲಸಗಳು ನಿಂತಿವೆ. ಬಿಜೆಪಿ ಪಕ್ಷದ ಆಡಳಿತ ಸಾಕೆನ್ನುವ ಮಟ್ಟಿಗೆ ಜನರು ಇದ್ದಾರೆ. ಹೀಗಾಗಿ ಬಿಜೆಪಿಯವರು ಹೆದರಿ ತಾಲೂಕು ಪಂಚಾಯಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನು ಮುಂದೂಡಿದ್ದಾರೆ" ಎಂದರು.
ಇನ್ನು "ನಾನು ಎಲ್ಲಿ ಚುನಾವಣೆಗೆ ನಿಲ್ಲಬೇಕು ಎಂದು ಸಚಿವ ಕೆ.ಎಸ್. ಈಶ್ವರಪ್ಪರನ್ನು ಕೇಳಬೇಕಾ? ಎಮ್ದು ಪ್ರಶ್ನಿಸಿರುವ ಅವರು, ನಮಗೆ ಹೇಳೋದಕ್ಕೆ ಈಶ್ವರಪ್ಪ ಯಾರು? ಜನರು ನನ್ನನ್ನು ಪ್ರೀತಿಯಿಂದ ಕರೆದಲ್ಲಿ ಹೋಗುತ್ತೇನೆ. ಕಾಂಗ್ರೆಸ್ ಹೈಕಮಾಂಡ್ ಎಲ್ಲಿ ಹೇಳುತ್ತೋ ಅಲ್ಲಿ ಚುನಾವಣೆಗೆ ನಿಲ್ಲುತ್ತೇನೆ" ಎಂದು ತಿರುಗೇಟು ನೀಡಿದ್ದಾರೆ.