ಲಕ್ನೋ, ಡಿ. 06 (DaijiworldNews/HR): ಉತ್ತರ ಪ್ರದೇಶದ ಪ್ರಮುಖ ಮುಸ್ಲಿಂ ಮುಖಂಡರಲ್ಲಿ ಒಬ್ಬರಾಗಿದ್ದ ಶಿಯಾ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ವಾಸಿಂ ರಿಜ್ವಿ ಅವರು ಇಸ್ಲಾಂ ಧರ್ಮವನ್ನು ತೊರೆದು ಹಿಂದೂ ಧರ್ಮವನ್ನು ಸೇರಿದ್ದು, ಇಂದು, ಗಾಜಿಯಾಬಾದ್ನಲ್ಲಿ, ಯತಿ ನರಸಿಂಹಾನಂದ ಸರಸ್ವತಿ ಅವರಿಗೆ ಸನಾತನ ಧರ್ಮಕ್ಕೆ ದೀಕ್ಷೆ ನೀಡಿದ್ದಾರೆ.
ನನ್ನನ್ನು ಇಸ್ಲಾಂನಿಂದ ಹೊರಹಾಕಲಾಗಿದ್ದು, ಪ್ರತಿ ಶುಕ್ರವಾರ ನಮ್ಮ ತಲೆಯ ಮೇಲೆ ಬಹುಮಾನವನ್ನು ಹೆಚ್ಚಿಸಲಾಗುತ್ತಿದ್ದುಇಂದು ನಾನು ಸನಾತನ ಧರ್ಮವನ್ನು ಅಳವಡಿಸಿಕೊಳ್ಳುತ್ತಿದ್ದೇನೆ ಎಂದು ವಾಸಿಂ ರಿಜ್ವಿ ಹೇಳಿದ್ದಾರೆ.
ಇನ್ನು ಈ ಕುರಿತು ಯತಿ ನರಸಿಂಹಾನಂದ ಸರಸ್ವತಿ ಪ್ರತಿಕ್ರಿಯಿಸಿ, "ನಾವು ವಾಸಿಂ ರಿಜ್ವಿ ಜೊತೆಗಿದ್ದೇವೆ ಮತ್ತು ರಿಜ್ವಿ ತ್ಯಾಗಿ ನಮಗೆ ಸಹೋದರಾಗಿದ್ದಾರೆ" ಎಂದರು.
ಶಿಯಾ ಸೆಂಟ್ರಲ್ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ವಾಸಿಂ ರಿಜ್ವಿ ಅವರು ಇಸ್ಲಾಂ ಧರ್ಮವನ್ನು ತೊರೆದು ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುವುದಾಗಿ ಘೋಷಿಸಿದ್ದರು.