ಜೈಪುರ್, ಡಿ. 06 (DaijiworldNews/HR): 15 ವರ್ಷದ ಬಾಲಕನೊಬ್ಬನನ್ನು ಶಾಲೆಯಿಂದ ಹೊರಹಾಕಿದಕ್ಕೆ ಈತ ಆ ಶಾಲೆಯ ಪ್ರಾಂಶುಪಾಲರನ್ನೇ ಗುಂಡಿಕ್ಕಿ ಕೊಲೆ ಮಾಡಲು ಯತ್ನಿಸಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ಬಾಲಕ 10ನೇ ತರಗತಿಯಲ್ಲಿ ಓದುತ್ತಿದ್ದು, ಸರಿಯಾಗಿ ನಡವಳಿಕೆ ಇಲ್ಲದ್ದ ಹಿನ್ನೆಲೆಯಲ್ಲಿ ಶಾಲೆಯಿಂದ ಹೊರಕ್ಕೆ ಹಾಕಲಾಗಿತ್ತು.
ಇದಾದ ಬಳಿಕ ಆತ ಏನೇನೋ ನೆಪ ಮಾಡಿ ಶಾಲೆಗೆ ಭೇಟಿ ಕೊಡುತ್ತಿದ್ದು, ಈ ವೇಳೆ ಕೂಡ ಪ್ರಾಂಶುಪಾಲರ ಕೊಠಡಿಗೆ ಹೋಗಿ ಬರುತ್ತಿದ್ದ. ಪಿಸ್ತೂಲ್ ತೆಗೆದುಕೊಂಡು ಹೋಗಿ ಪ್ರಾಂಶುಪಾಲ ಭಗವಾನ್ ತ್ಯಾಗಿ ಎಂಬವರನ್ನು ಕೊಲೆ ಮಾಡುವ ಯತ್ನ ಮಾಡಿದ್ದಾನೆ.
ಇನ್ನು ಬಾಲಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಬಾಲ ನ್ಯಾಯ ಕಾಯ್ದೆಯಡಿ ಬಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.