ಕುಣಿಗಲ್ , ಡಿ 05 (DaijiworldNews/MS): ಅಧಿಕಾರ ಶಾಶ್ವತವಲ್ಲ ಎಂಬ ತತ್ವದ ಮೇಲೆ ನಾನು ರಾಜಕೀಯ ಮಾಡಿಕೊಂಡು ಬಂದಿದ್ದೇನೆ. ಆದರೆ ನನ್ನ ಪಕ್ಷದಲ್ಲಿ ಬೆಳೆದು ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿಯಾಗಿ ಈಗ ಮತ್ತೊಂದು ಬಾರಿಗೂ ಕನಸು ಕಾಣುತ್ತಿದ್ದಾರೆ. ಹೀಗಾದರೆ ಮೂಲ ಕಾಂಗ್ರೆಸ್ನವರ ಪಾಡೇನು ಎಂದು ಮಾಜಿ ಪ್ರದಾನಿ ಹೆಚ್.ಡಿ.ದೇವೇಗೌಡ ಪರೋಕ್ಷವಾಗಿ ಸಿದ್ದರಾಮಯ್ಯ ನವರಿಗೆ ತಿರುಗೇಟು ನೀಡಿದ್ದಾರೆ.
ತಾಲ್ಲೂಕಿನ ಗವಿಮಠದಲ್ಲಿ ವಿಧಾನಪರಿಷತ್ ಚುನಾವಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು , "ನಾನು ಮಣ್ಣಿನ ಮಗ ಎಂದು ವೈಯಕ್ತಿಕವಾಗಿ ಕರೆಸಿಕೊಂಡಿಲ್ಲ. ಅದನ್ನ ಯಾರಿಟ್ಟರೋ ಎಂಬುದೇ ನನಗೂ ಕೂಡಾ ಯಕ್ಷ ಪ್ರಶ್ನೆಯಾಗಿದೆ. ಆದರೆ ಈಗ ನನ್ನ ಪಕ್ಷದಲ್ಲಿ ಬೆಳೆದವರೆ ಈ ಬಗ್ಗೆ ಟೀಕೆ ಮಾಡುತಿದ್ದಾರೆ " ಎಂದು ಬೇಸರಿಸಿಕೊಂಡರು.
ಪ್ರಸ್ತುತ ಸನ್ನಿವೇಶದಲ್ಲಿ ಕುಣಿಗಲ್ ಕ್ಷೇತ್ರ ಬೆಂಗಳೂರು ಗ್ರಾಮಾಂತರಕ್ಕೆ ಸೇರಿದ ಪರಿಣಾಮ ನಾನು ತುಮಕೂರು ಲೋಕಸಭಾ ಚುನಾವಣೆಯಲ್ಲಿ ಸೋತೆ ಈ ಕ್ಷೇತ್ರದ ರಾಜಕೀಯ ಮಹಿಮೆ ಇತಿಹಾಸ ಪುಟ ಪುನರ್ ರಾಜಕೀಯ ಜನ್ಮ ನೀಡಿದ ಕ್ಷೇತ್ರ ಎಂದು 1991ರ ಉಪ ಚುನಾವಣೆಯನ್ನು ಸ್ಮರಿಸಿಕೊಂಡರು.