ಹೈದರಾಬಾದ್, ಡಿ.05 (DaijiworldNews/HR): ಚಾಲನಾ ಪರವಾನಗಿಯನ್ನು ಪಡೆದ ದೇಶದ ಮೊದಲ ಕುಬ್ಜ ಎಂಬ ಹೆಗ್ಗಲಿಕೆಗೆ ಹೈದರಾಬಾದ್ ನಿವಾಸಿಯಾಗಿರುವ ಗಟ್ಟಿಪಲ್ಲಿ ಶಿವಪಾಲ್ ಅವರು ಪಾತ್ರರಾಗಿದ್ದಾರೆ.
ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ಕೇವಲ ಮೂರು ಅಡಿ ಎತ್ತರದ ಶಿವಪಾಲ್( 42 ), ತನ್ನ ಅಂಗ ವೈಫಲ್ಯವನ್ನು ಮೆಟ್ಟಿ ನಿಂತು ಕರೀಂನಗರದ ತನ್ನ ಪ್ರದೇಶದಲ್ಲಿ ಪದವಿಯನ್ನು ಪೂರ್ಣಗೊಳಿಸಿದ ಮೊದಲ ಕುಬ್ಜ ವ್ಯಕ್ತಿ ಎನಿಸಿಕೊಂಡಿದ್ದಾರೆ.
ಈ ಕುರಿತು ಮಾತನಾಡಿದ ಶಿವಪಾಲ್, "ನನ್ನ ಎತ್ತರದ ಕಾರಣದಿಂದ ಅನೇಕ ಮಂದಿ ನನ್ನನ್ನು ಚುಡಾಯಿಸುತ್ತಿದ್ದರು ಮತ್ತು ಇಂದು ನಾನು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ನಾಮನಿರ್ದೇಶನಗೊಂಡಿದ್ದೇನೆ. ಚಾಲನಾ ತರಬೇತಿಗಾಗಿ ಅನೇಕ ಕುಳ್ಳಗಿನ ಜನರು ನನ್ನನ್ನು ಸಂಪರ್ಕಿಸುತ್ತಿದ್ದಾರೆ. ದೈಹಿಕ ವಿಕಲಚೇತನರಿಗಾಗಿ ಮುಂದಿನ ವರ್ಷ ಡ್ರೈವಿಂಗ್ ಶಾಲೆಯನ್ನು ಪ್ರಾರಂಭಿಸಲು ನಿರ್ಧರಿಸಿದ್ದೇನೆ" ಎಂದಿದ್ದಾರೆ.
ಇನ್ನು ಪ್ರತಿಯೊಬ್ಬರಲ್ಲಿ ಕೆಲವು ದೋಷಗಳಿವೆ, ಆದರೆ ನಿಮ್ಮ ಗುಪ್ತ ಪ್ರತಿಭೆಯನ್ನು ಕಂಡುಹಿಡಿಯುವುದು ಮತ್ತು ಅವುಗಳನ್ನು ಸಾಧಿಸುವುದು ಮುಖ್ಯವಾದುದು ಎಂದು ಹೇಳಿದ್ದಾರೆ.